ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಕಡೇಶಿವಾಲಯದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಏ. 9ರಂದು ಮಧ್ಯಾಹ್ನ ಮಹಾಪೂಜೆ ನಂತರ ಧ್ವಜಾರೋಹಣ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಅರ್ಚನಾ ಭಟ್,ತಹಶೀಲ್ದಾರರು, ಬಂಟ್ವಾಳ ಆಡಳಿತಾಧಿಕಾರಿಯವರು ಅಧ್ಯಕ್ಷರು,
ಜಾತ್ರಾ ಉತ್ಸವ ಸಮಿತಿ, ಬಂಟ್ವಾಳ ಪೊಲೀಸ್ ಠಾಣಾಧಿಕಾರಿ ಶ್ರೀ ಶಿವಕುಮಾರ್ ಶ್ರೀ ಕರಿಬಸಪ್ಪ ನಾಯ್ಕ, ಗ್ರಾಮ ಆಡಳಿತಾಧಿಕಾರಿ, ಕಡೇಶ್ವಾಲ್ಯ ಗ್ರಾಮ ಉಪಾಧ್ಯಕ್ಷರು, ಜಾತ್ರಾ ಉತ್ಸವ ಸಮಿತಿ ಮತ್ತು ಜಾತ್ರಾ ಉತ್ಸವ ಸಮಿತಿಯ ಸದಸ್ಯರು ಹಾಗೂ ಅರ್ಚಕರ ವೃಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.