ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ್ (ಡಿಎಪಿಸಿಯು), ಇವರ ಸಹಯೋಗದಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ರಕ್ತನಿಧಿ, ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನಾಚರಣೆ” ಕರ‍್ಯಕ್ರಮವನ್ನು ಆಚರಿಸಲಿದೆ. ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿರ‍್ಷ ಈ ದಿನವನ್ನು ಆಚರಿಸಲಾಗುತ್ತದೆ.

ಮುಖ್ಯ ಅತಿಥಿ ಡಾ. ಎಚ್.ಆರ್.ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಟಿಬಿ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬದರುದ್ದೀನ್ ಎಂ.ಎನ್. ಮತ್ತು ವೈಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹಮಾನ್ ಎ.ಎ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕೆ.ಎಸ್. ಗಂಗಾಧರ ಸೋಮಯಾಜಿ, ರಿಜಿಸ್ಟ್ರಾರ್, ಯೆನೆಪೋಯ (ವಿಶ್ವವಿದ್ಯಾಲಯ ವೆಂದು ಪರಿಗಣಿಸಲಾಗಿದೆ), ಇವರು ವಹಿಸಲಿದಾರೆ. ವೈಎಂಸಿಎಚ್ ರಕ್ತನಿಧಿ ಮುಖ್ಯ ವೈದ್ಯಾಧಿಕಾರಿ ಡಾ.ಇಂದಿರಾ. ಎಸ್.ಪುತ್ರನ್ ಎಲ್ಲರನ್ನು ಸ್ವಾಗತಿಸಲಿದ್ದಾರೆ.

ಪ್ರತಿ ವರ್ಷ, ವಿಶ್ವ ರಕ್ತದಾನಿಗಳ ದಿನವನ್ನು ಡಬ್ಯುಎಚ್‌ ಒ ಥೀಮ್ ಇಟ್ಟೆ ಕೊಂಡು ಆಚರಣೆ ಮಾಡಲಾಗುತ್ತದೆ. ಈ ವರ್ಷ 20 ವರ್ಷಗಳ ರಕ್ತದಾನ ಸಂಭ್ರಮ: ರಕ್ತದಾನಿಗಳಿಗೆ ಧನ್ಯವಾದಗಳು!” ಎಂಬಾ ಘೋಷಾ ವಾಕ್ಯಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ಬಹುಮುಖ್ಯವಾಗಿ, ಈ ದಿನದಂದು, ರಕ್ತದಾನ ಮಾಡಲು ಜನರನ್ನು ಆಹ್ವವ ನಿಸುವ “ಸ್ವಯಂ ಪ್ರೇರಿತ ರಕ್ತದಾನ ವಾರಾಚರಣೆ: ಅಭಿಯಾನವನ್ನು 10/06/2024 ರಿಂದ 16/06/2024 ರವರೆಗೆ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಿಗೆ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಇ-ಪೋಸ್ಟರ್ ಮತ್ತು ರೀಲ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.