ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜು.14ನೇ ಭಾನುವಾರ ಸಂಜೆ 4 ಗಂಟೆಗೆ” ಕಾವೇರಿ ನದಿ ನೀರಿನ” ಕುರಿತು ಸರ್ವಪಕ್ಷಗಳ ಸಭೆಯನ್ನು ಏರ್ಪಾಡು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಸಭೆಗೆ ರಾಜ್ಯದ ಸರ್ವಪಕ್ಷಗಳ ಸದಸ್ಯರು, ಕೇಂದ್ರ ಸಚಿವರು, ಸಂಸತ್ ಸದಸ್ಯರು, ಕಾವೇರಿ ಜಲಾನಯನ ಪ್ರದೇಶದ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ಹಾಜರಾಗಿ ಕಾವೇರಿ ನೀರು ಹಂಚಿಕೆಯಲ್ಲಿ ಉದ್ಭವವಾಗಿರುವ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಸಲಹೆ ನೀಡಬೇಕೆಂದು ಸಿ.ಎಂ.ಸಿದ್ಧರಾಮಯ್ಯ ಸೂಚಿಸಿದ್ದಾರೆ.
ಕರುನಾಡ ಜೀವನದಿ ಕಾವೇರಿಯ ರಕ್ಷಣೆಗಾಗಿ, ನಾಡಿನ ರೈತರ ಹಿತ ಕಾಯುವುದಕ್ಕಾಗಿ ನಿಮ್ಮೆಲ್ಲರ ಸಹಕಾರವಿರಲಿ.