ಬ್ರೆಜಿಲಿಯಾ: ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ, ವಸ್ತುನಿಷ್ಠ ವರದಿಗಳ ಮೂಲಕ ಜನತೆಯ ವಿಶ್ವಾಸ ಗಳಿಸಿಕೊಳ್ಳುವ ಉದ್ದೇಶದಿಂದ ಪತ್ರಕರ್ತರು (Journalists) ಇನ್ನಿಲ್ಲದ ಸಾಹಸಗಳಿಗೆ ಮುಂದಾಗುತ್ತಾರೆ. ಆ ಮೂಲಕ ಕಟು ಸತ್ಯವನ್ನು ಬಯಲಿಗೆಳೆದಿರುವ ಸಂಗತಿಗಳು ಅನೇಕ. ಅದೇ ರೀತಿಯ ಪ್ರಕರಣವೊಂದು ಈಗ ಬ್ರೆಜಿಲ್‌ನಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಪ್ರಧಾನಮಂತ್ರಿ ಅವರಿಂದ ಶ್ರೀ ಜಗದೀಪ್ ಧನಕರ್ ಅವರಿಗೆ ಉತ್ತಮ ಆರೋಗ್ಯದ ಹಾರೈಕೆ
ಹೌದು. 13 ವರ್ಷದ ಬಾಲಕಿ ನಾಪತ್ತೆಯಾಗಿದ್ದ (The girl Missing) ಸ್ಥಳದಲ್ಲಿ ವರದಿಗಾರಿಕೆ ಮಾಡುವಾಗ ಟಿವಿ ವರದಿಗಾರನೊಬ್ಬ ಆಕಸ್ಮಿಕವಾಗಿ ಆಕೆಯ ಮೃತದೇಹದ ಮೇಲೆ ಕಾಲಿಟ್ಟ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಮೃತ ಬಾಲಕಿಯನ್ನ ರೈಸಾ ಗುರುತಿಸಲಾಗಿದೆ. ಈಶಾನ್ಯ ಬ್ರೆಜಿಲ್‌ನ ಬಕಾಬಲ್‌ನಲ್ಲಿರುವ ಮೀರಿನ್ ನದಿಯಲ್ಲಿ (Mearin River) ದುರಂತ ಸಂಭವಿಸಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತ್ರಕರ್ತ ಲೆನಿಲ್ಡೊ ಫ್ರಾಜಾವೊ (Lenildo Fraza) ಬಾಲಕಿ ಕಣ್ಮರೆಯಾಗಿದ್ದ ಸ್ಥಳದಲ್ಲಿ ನದಿಯ ನಿಖರ ಆಳ ತೋರಿಸಲು ನದಿಗೆ ಇಳಿದಿದ್ದರು. ಅಲ್ಲದೇ ಸಾವಿಗೂ ಮುನ್ನ ಆ ಕ್ಷಣದಲ್ಲಿ ಬಾಲಕಿ ಸ್ಥಿತಿ ಏನಿತ್ತು ಅನ್ನೋದನ್ನ ಲೈವ್‌ನಲ್ಲಿ ವಿವರಿಸುತ್ತಿದ್ದರು. ಈ ಸಮಯದಲ್ಲಿ ನದಿ ನೀರಿನ ಆಳ ಎದೆಮಟ್ಟದಷ್ಟಿತ್ತು. ಹೀಗಿರುವಾಗ ಘಟನೆ ವಿವರಿಸುತ್ತಲೇ ಒಂದು ಹೆಜ್ಜೆ ಮುಂದಿಟ್ಟಾಗ ಮುಗ್ಗರಿಸಿದಂತಾಗುತ್ತದೆ.
ತಕ್ಷಣ ಇಲ್ಲಿನ ತಳದಲ್ಲಿ ಏನೋ ಇದೆ ಅನ್ನಿಸುತ್ತಿದೆ ಎಂದು ತನ್ನ ಸಹ ಸಿಬ್ಬಂದಿಗೆ ಹೇಳ್ತಾರೆ. ಸ್ವಲ್ಪ ಸಮಯದ ಬಳಿಕ ನಾನಿನ್ನೂ ಮುಂದೆ ಹೋಗಲ್ಲ, ನನಗೆ ಭಯ ಆಗ್ತಿದೆ, ಅದು ಮನುಷ್ಯನ ತೋಳಿನಂತೆ ಕಾಣ್ತಿತ್ತು. ಒಂದು ವೇಳೆ ಅದು ನಾಪತ್ತೆಯಾದ ಬಾಲಕಿಯದ್ದೇ ಆಗಿರಬಹುದಾ ಅಂತ ಸಂಶಯ ವ್ಯಕ್ತಪಡಿಸ್ತಾರೆ. ಮತ್ತೊಂದು ಕಡೆ ಅದು ಮೀನು ಕೂಡ ಆಗಿರಬಹುದಲ್ವಾ? ಏನೋ ಗೊತ್ತಿಲ್ಲ ಅಂತ ಹೇಳ್ತಾರೆ.
ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಬಳಿಕ ಪೊಲೀಸರು ರಕ್ಷಣಾ ತಂಡದ ಸಹಾಯದಿಂದ ಪತ್ರಕರ್ತ ವರದಿ ಮಾಡುತ್ತಿದ್ದ ನಿಖರ ಸ್ಥಳದಲ್ಲೇ ಮೃತದೇಹವನ್ನ ಹೊರತೆಗೆಯುತ್ತಾರೆ. ಇನ್ನೂ ಈ ಘಟನೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದ್ದು, ವರದಿಗಾರನನ್ನೂ ತನಿಖೆಗೆ ಒಳಪಡಿಸುವಂತೆ ಕೆಲವರು ಆಗ್ರಹಿಸಿದ್ದಾರೆ.