ಜವಾಹರ್ ಬಾಲ್ ಮಂಚ್ ಇದರ ಹೊಸ ಯೂಟ್ಯೂಬ್ ಚಾನೆಲ್ ಜೆ ಬಿ ಎಮ್ ಟಿವಿ (JBM tv )ಲಾಂಚ್ ನ್ನು ರಾಷ್ಟ್ರೀಯ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ ಶ್ರೀಯುತ ಕೆ ವಿ ವೇಣುಗೋಪಾಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ, ಇಂದಿರಾ ಭವನ ದೆಹಲಿಯಲ್ಲಿ ಬಿಡುಗಡೆ ಗೊಳಿಸಿದರು. ಇದನ್ನೂ ಓದಿ : ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು

ಈ ಸಂಧರ್ಭದಲ್ಲಿ ಜವಾಹರ್ ಬಾಲ್ ಮಂಚ್ ದ ಕ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಶೈಲಜಾ ರಾಜೇಶ್, ಮತ್ತು ಜವಾಹರ್ ಬಾಲ್ ಮಂಚ್ ನ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶೌರ್ಯ ಉಪಸ್ಥಿತರಿದ್ದು.

ಕರ್ನಾಟಕ ರಾಜ್ಯದಲ್ಲಿ ಜವಾಹರ ಬಾಲ್ ಮಂಚ್ ನ ಸಂಘಟನೆಯ ಬಗ್ಗೆ ಚರ್ಚಿಸಿ ವೇಣುಗೋಪಾಲ್ ರವರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಜವಾಹರ್ ಬಾಲ್. ಮಂಚ್. ಸಂಘಟನೆ ಬಲಪಡಿಸಲು ಸೂಕ್ತ ಸಲಹೆ  ಸೂಚನೆ ನೀಡಿದರು.