ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಮಾಮೇಶ್ವ್ರರ ಕಾರ್ಯಕ್ಷೇತ್ರದ ಸುಧಾಕರ ಗೌಡ ಅವರ ಕೃಷಿ ಜಮೀನಿನಲ್ಲಿ ಮಲ್ಲಿಗೆ ಕೃಷಿ ನಾಟಿ ತರಬೇತಿಯನ್ನು ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಮೇಶ್ವ್ರರ ಒಕ್ಕೂಟದ ಅಧ್ಯಕ್ಷರಾದ ಹರೀಶ್ ವಹಿಸಿದ್ದರು.
ಗ್ರಾಮಭಿವೃದ್ಧಿ ಯೋಜನೆಯ ವಿಟ್ಲ ತಾಲ್ಲೂಕು ಯೋಜನಾಧಿಕಾರಿ ರಮೇಶ್ ಮಲ್ಲಿಗೆ ಕೃಷಿ ಮಾಡಿ ಉತಮ್ಮ ಆದಾಯ ಪಡೆದು ಬದುಕು ಕಟ್ಟಿಕೊಳ್ಳಿ ಎಂದು ಶುಭ ಹಾರೈಸಿದರು.
ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಅವರು ಮಲ್ಲಿಗೆ ಕೃಷಿ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ಮಲ್ಲಿಗೆ ಕೃಷಿ ಗೆ ವಾತಾವರಣ, ಭೂಮಿ ತಯಾರಿ ,ಮಣ್ಣಿನ ರಸಸಾರ ನಿರ್ವಹಣೆ,ನೀರು,ಗೊಬ್ಬರ ನಿರ್ವಹಣೆ,ಗಿಡಗಳಿಗೆ ಬರುವ ,ರೋಗ ರುಜಿನಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಸ್ಥಳೀಯ ಮಲ್ಲಿಗೆ ಕೃಷಿಕರಾದ ಶ್ರೀಮತಿ ಗೀತಾ ಅವರು ಮಲ್ಲಿಗೆ ಕೃಷಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಂಯೋಜಕರಾದ ಜಯಶೀಲ, ಕಮಲ, ಸೇವಾ ಪ್ರತಿನಿಧಿ ಯಶೋಧ ಉಪಸ್ಥಿತರಿದ್ದರು.
ಸುಮಾರು 50 ಮಂದಿ ಮಲ್ಲಿಗೆ ಕೃಷಿ ಆಸಕ್ತರು ಭಾಗವಹಿಸಿ ಮಾಹಿತಿ ಪಡಕೊಂಡರು. ಕುಸುಮ ಸ್ವಾಗತಿಸಿ, ಯಶೋಧ ವಂದಿಸಿದರು.