ಕರ್ನಾಟಕದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸನಾತನ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಪದ್ಮವಿಭೂಷಣ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಸ್ಮರಣಾರ್ಥ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಪೂಜ್ಯ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹಾಗೂ ದೇಶ ಕಂಡ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ನಂತರ ಅವರು ಜನ್ಮವೆತ್ತಿದ ನೆಲದಿಂದಲೇ ಮೇಲೆದ್ದು ಬಂದ ದಿಟ್ಟೆದೆಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಮಾನ್ಯ ಅಮಿತ್ ಶಾ ಜೀ ಅವರ ಸಮ್ಮುಖದಲ್ಲಿ ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿದರು.
ಸನಾತನ ಧರ್ಮಕ್ಕೆ ನೂರು ಕಂಟಕಗಳು ಎದುರಾಗಿದ್ದಾಗ ಅದನ್ನು ಸಾತ್ವಿಕತೆಯಿಂದ, ದಿಟ್ಟತನದಿಂದ ಎದುರಿಸಿ ನಿಂತ ಒಬ್ಬ ಮಹಾನ್ ತಪಸ್ವಿಯನ್ನು ಕರ್ನಾಟಕ ಕಂಡಿದ್ದರೆ ಅದು ಪೂಜ್ಯ ವಿಶ್ವೇಶ್ವರ ತೀರ್ಥರು ಮಾತ್ರ ಪೂಜ್ಯ ವಿಶ್ವೇಶ್ವರ ತೀರ್ಥರ ಹೆಸರಿನಲ್ಲಿ ನಾಡಿನ ಮೂಲೆ ಮೂಲೆಯಲ್ಲಿ ವಿವಾಹ ಕಾರ್ಯಗಳು, ಅವರು ಕೊಟ್ಟ ಸಂದೇಶಗಳು, ಅವರ ಬದುಕಿದ ಪ್ರೀತಿ , ಧರ್ಮಕ್ಕಾಗಿ ಅವರು ಮಾಡಿದ ತ್ಯಾಗ, ಕೃಷ್ಣ – ರಾಮರ ಶ್ರೇಷ್ಠತೆಯನ್ನು ಸಾರುವುದಕ್ಕಾಗಿ ಅವರು ನಡೆಸಿದಂತ ತಪಸ್ವೀ ಜೀವನ ಇಂದಿನ ಅವರ ಹೆಸರಿನ ಸ್ಮಾರಕ ಆಸ್ಪತ್ರೆಯ ಸಮರ್ಪಣೆ ನಮಗೆಲ್ಲ ಪ್ರೇರಣೆ ಒದಗಿಸಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರು, ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಸಮಾಜದ ಗಣ್ಯರು, ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.