ನವದೆಹಲಿ: ಇರಾನ್ – ಇಸ್ರೇಲ್ ಯುದ್ಧದಿಂದ  ಭಾರತ ನಷ್ಟ ಅನುಭವಿಸುತ್ತಿದೆ. ಕಚ್ಚಾ ತೈಲ ಹಾಗೂ ಅಡುಗೆ ಎಣ್ಣೆಯಲ್ಲಿ ಒಂದಿಷ್ಟು ಸಮಸ್ಯೆ ಉಂಟಾದರೆ ಭಾರತದಿಂದ (India) ರಫ್ತಾಗುತ್ತಿದ್ದ ಚಹಾ(Tea) ರಫ್ತು ಈಗ ಸ್ಥಗಿತಗೊಂಡಿದೆ. ಇದನ್ನೂ ಓದಿ : ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಭೇಟಿ

ರಷ್ಯಾ ರಷ್ಯಾ ನಂತರ ಎರಡನೇ ಅತೀ ಹೆಚ್ಚು ಚಹಾ ಇರಾನ್‌ಗೆ ಭಾರತದಿಂದ ಹೋಗುತ್ತಿತ್ತು. ಈಗ ಇರಾನ್ ಇಸ್ರೇಲ್ ಯುದ್ಧದಿಂದಾಗಿ ರಫ್ತು ನಿಂತಿದೆ. 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಇರಾನ್‌ಗೆ ಭಾರತ ರಫ್ತು ಮಾಡಿತ್ತು. ಈ ವರ್ಷ ಹೆಚ್ಚಿನ ರಫ್ತು ಮಾಡುವ ಸಾಧ್ಯತೆ ಇತ್ತು. ಆದರೆ ದಿಢೀರ್‌ ಬೆಳವಣಿಗೆಯಿಂದ ರಫ್ತು ಸ್ಥಗಿತವಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ರಫ್ತಾಗಬೇಕಿದ್ದ ಚಹಾ ನಿಂತುಕೊಂಡಿದೆ. ಇರಾನ್‌ನಲ್ಲಿರುವ ಖರೀದಿದಾರರು ಸಹ ಟೀ ಆಮದು ಮಾಡಿಸಿಕೊಳ್ಳಬೇಕಾ? ಬೇಡವಾ ಎಂಬ ಗೊಂದಲದಲ್ಲೇ ಇದ್ದು ಯಾವುದೇ ರೀತಿ ಮೊತ್ತವನ್ನು ಸಹ ಕಳುಹಿಸುತ್ತಿಲ್ಲ. ಇದನ್ನೂ ಓದಿ : ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌ 

2024 ರಲ್ಲಿ ಭಾರತ ಒಟ್ಟು 7,111 ಕೋಟಿ ರೂ. ಮೌಲ್ಯದ 255 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಇದರಲ್ಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳವು 4,833 ಕೋಟಿ ರೂ. ಮೌಲ್ಯದ 154.81 ಮಿಲಿಯನ್ ಕೆಜಿ ರಫ್ತು ಮಾಡಿದರೆ ದಕ್ಷಿಣ ಭಾರತದಿಂದ 2,278 ಕೋಟಿ ರೂ. ಮೌಲ್ಯದ 99.86 ಮಿಲಿಯನ್ ಕೆಜಿ ರಫ್ತು ಮಾಡಿದೆ. ಈ ಒಟ್ಟು ಉತ್ಪಾದನೆಯಲ್ಲಿ ಇರಾನ್‌ಗೆ ರಫ್ತಾಗುವ ಒಟ್ಟು ಟೀಯಲ್ಲಿ ಅಸ್ಸಾಂನಿಂದ ಶೇ.80 ರಷ್ಟು, ಬಂಗಾಳದಿಂದ ಶೇ.20 ರಷ್ಟು ರಫ್ತಾಗುತ್ತದೆ.

2022 ರಲ್ಲಿ 22 ಮಿಲಿಯನ್‌ ಕೆಜಿ, 2023 ರಲ್ಲಿ 5.9 ಮಿಲಿಯನ್‌ ಕೆಜಿ, 2024 ರಲ್ಲಿ 31 ಮಿಲಿಯನ್‌ ಕೆಜಿ ಚಹಾವನ್ನು ಭಾರತ ಇರಾನ್‌ಗೆ ರಫ್ತು ಮಾಡಿದೆ.