ನವದೆಹಲಿ: ಇಸ್ರೇಲ್‌ ಹಾಗೂ ಇರಾನ್‌ ಸಂಘರ್ಷದಿಂದ  ಭಾರತದ ಅಕ್ಕಿ ರಫ್ತಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಇರಾನ್‌ಗೆ ರಫ್ತಾಗಬೇಕಿದ್ದ (Export) ಸುಮಾರು 1 ಲಕ್ಷ ಟನ್ ಬಾಸ್ಮತಿ ಅಕ್ಕಿ  ಭಾರತದ ಬಂದರುಗಳಲ್ಲೇ ಉಳಿದುಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಮಾಹಿತಿ ನೀಡಿದೆ.  ಇದನ್ನೂ ಓದಿ : ತಿರುಪತಿ : ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ 10 ಲಕ್ಷ ಕೆಜಿ ತುಪ್ಪಕ್ಕೆ ಬೇಡಿಕೆ

ಸೌದಿ ಅರೇಬಿಯಾದ ನಂತರ ಭಾರತ ದಿಂದ ಹೆಚ್ಚು ಬಾಸ್ಮತಿ ಅಕ್ಕಿ ಆಮದು ಮಾಡಿಕೊಳ್ಳುವ ರಾಷ್ಟ್ರ ಇರಾನ್ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 10 ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತದಿಂದ ಇರಾನ್‌ಗೆ ರಫ್ತಾಗಿತ್ತು. ಈಗ ನಡೆಯುತ್ತಿರುವ ಸಂಘರ್ಷದಿಂದಾಗಿ, ರಫ್ತಾಗಬೇಕಿದ್ದ 18% – 20% ರಷ್ಟು ಬಾಸ್ಮತಿ ಅಕ್ಕಿ ಇಲ್ಲೇ ಉಳಿಯುವಂತಾಗಿದೆ.

ಇರಾನ್‌ಗೆ ತೆರಳಬೇಕಿದ್ದ ಅಕ್ಕಿ ತುಂಬಿದ ಹಡಗುಗಳು ಗುಜರಾತ್‌ನ ಕಾಂಡ್ಲಾ ಹಾಗೂ ಮುಂಡ್ರಾ ಬಂದರಿನಲ್ಲೇ ಉಳಿದಿವೆ. ಸಂಘರ್ಷ ನಡೆಯುತ್ತಿರುವುದರಿಂದ ಹಡಗಿನಲ್ಲಿರುವ ಸರಕಿಗೆ ವಿಮೆ ಅನ್ವಯವಾಗುವುದಿಲ್ಲ. ಇದರಿಂದ ರಫ್ತುದಾರರು ನಷ್ಟವಾಗುವ ಆತಂಕದಲ್ಲಿದ್ದಾರೆ. ದೇಶೀಯ ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಕೇಜಿಗೆ 4ರಿಂದ 5 ರೂ. ಕಡಿಮೆಯಾಗಿರುವುದು ರಫ್ತುದಾರರನ್ನು ಮತ್ತಷ್ಟು ಚಿಂತೆಗೆದೂಡಿದೆ.  ಇದನ್ನೂ ಓದಿ : ಕರೋಪಾಡಿ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ