ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲೆ ಮಧುಕರ ಸಭಾಂಗಣದಲ್ಲಿ ನಡೆದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಜಿಲ್ಲಾ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಗೋಳ್ತಮಜಲು ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಶ್ರೀರಾಮ ಮಂದಿರ ಕಲ್ಲಡ್ಕದ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾಗಿರುವ ಶ್ರೀಮತಿ ಲಖಿತಾ ಆರ್ ಶೆಟ್ಟಿ ಅವರು ಮಾತನಾಡಿ “ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎಂದು ತಿಳಿಸುತ್ತಾ, ಯೋಗ ಎಂಬುದು ದೀಪದಂತೆ, ದೀಪ ಹೇಗೆ ಬೆಳಕನ್ನು ನೀಡಿ ಕತ್ತಲೆಯನ್ನು ಕಳೆಯುತ್ತದೆ ಹಾಗೆಯೇ ಯೋಗವು ಮನುಷ್ಯನ ನಕಾರಾತ್ಮಕ ಯೋಚನೆಗಳನ್ನು ತೆಗೆದುಹಾಕುತ್ತದೆ, ಆಧ್ಯಾತ್ಮಿಕಚಿಂತನೆಯನ್ನು ವೃದ್ಧಿಸುತ್ತದೆ, ವಿದ್ಯಾರ್ಥಿಗಳು ದಿನದ ಒಂದು ಸಮಯವನ್ನುಯೋಗಕ್ಕೆ ನೀಡಬೇಕು” ಎಂದು ತಿಳಿಸಿದರು.

ರಾಜಾರಾಮ್ ಐತಾಳ್ (ಜೀವನ ಕಲೆ ಪ್ರತಿಷ್ಠಾನ ಬಂಟ್ವಾಳ ಘಟಕದ ಯೋಗಶಿಕ್ಷಕರು )ಅವರ ಮಾತಿನಲ್ಲಿ “ಪತಂಜಲಿ ಮಹರ್ಷಿಗಳ ಯೋಗ ಪಂಚ ಸೂತ್ರಗಳನ್ನು ತಿಳಿಸಿದರು. ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲು ಇರುವ ಶಾಸ್ತ್ರ ಯೋಗವಾಗಿದೆ. ನಿದ್ದೆ ಮತ್ತು ಕೋಪವನ್ನು ನಿಯಂತ್ರಿಸಲು ಉತ್ತಮ ಔಷಧಯೋಗ ಮತ್ತು ಮುದ್ರೆ, ಶರೀರ, ಉಸಿರು, ಮನಸ್ಸು, ಚಿತ್ತ, ಆತ್ಮ ಹಾಗೂ ಭಾವನೆ ಮತ್ತು ಆಲೋಚನೆಗಳನ್ನು ನಿಯಂತ್ರಣದಲ್ಲಿಇರಬೇಕು” ಎಂದು ತಿಳಿಸಿದರು.

ಇನ್ನೋರ್ವ ಮುಖ್ಯಅತಿಥಿ ರಾಷ್ಟ್ರೀಯ ಸೇವಿಕಾ ಸಮಿತಿ ಬಂಟ್ವಾಳ ತಾಲೂಕಿನ ಕಾರ್ಯವಾಹರಾಗಿರುವ ಶ್ರೀಮತಿ ಪಣಿಪ ಅವರ ಮಾತುಗಳಲ್ಲಿ” ಯೋಗಶಾಸ್ತçವು ನಮ್ಮ ಭಾವನೆಗಳನ್ನು ನಿಯಂತ್ರಿಸುತ್ತದೆ, ವಿದ್ಯಾರ್ಥಿಜೀವನದಲ್ಲಿ ಮಾನಸಿಕ ದೈಹಿಕವಾಗಿ ಆರೋಗ್ಯದಿಂದ ಜೀವನವನ್ನು ಕಳೆಯುವುದು” ಎಂದು ತಿಳಿಸಿದರು.

ಯೋಗ ಸಪ್ತಾಹ ತರಬೇತಿ ನೀಡಿದ ವಾರಣಾಸಿ ಯೋಗಾ ಶ್ರಮದ ಯೋಗ ಗುರೂಜಿಯಾಗಿರುವ ಪ್ರಕಾಶಾನಂದ ಗುರೂಜಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.

ವಿದ್ಯಾ ಕೇಂದ್ರದ ಸಹಸ ಸಂಚಾಲಕರಾದ ರಮೇಶ್‌ಎನ್, ಮುಖ್ಯೋಪಾಧ್ಯಾಯರಾದಗೋಪಾಲ ಎಂ. ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಂಕಲ್ಪ ಪ್ರತಿಜ್ಞೆಯನ್ನು ಹಾಗೂ ಯೋಗ ಪ್ರಾತ್ಯಕ್ಷತೆಯನ್ನು ಮಾಡಿಸಲಾಯಿತು. ಕಾರ್ಯಕ್ರಮವನ್ನುಆರುಷ್ ನಾಡಿಗ ನಿರೂಪಿಸಿ, ದಿಶಾ ಸ್ವಾಗತಿಸಿ,ರೇಷ್ಮಾ ವಂದಿಸಿದರು.ಶಾಂತಿಮಂತ್ರದೊಂದಿಗೆ ಕೊನೆಗೊಂಡಿತು.