ಅಂತಾರಾಷ್ಟ್ರೀಯ ಚಹಾ ದಿನದ ಮೊದಲ ಆಚರಣೆಯು 2005 ರಲ್ಲಿ ಪ್ರಾರಂಭವಾಯಿತು, ಇದನ್ನು ಏಷ್ಯಾ ಮತ್ತು ಆಫ್ರಿಕಾದ ಕಾರ್ಮಿಕ ಸಂಘಗಳು, ಸಣ್ಣ ಚಹಾ ಉತ್ಪಾದಕರು ಮತ್ತು ಸಾಮಾಜಿಕ ಸಂಸ್ಥೆಗಳು ಬೆಂಬಲಿಸಿದವು. ಚಹಾ ಉತ್ಪಾದಕರಿಗೆ ನ್ಯಾಯಯುತ ಬೆಲೆ ಮತ್ತು ಕಾರ್ಮಿಕರ ಜೀವನಮಟ್ಟ ಮತ್ತು ವೇತನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ನಂತರ 2015 ರಲ್ಲಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲು ಅಧಿಕೃತವಾಗಿ ಪ್ರಸ್ತಾಪಿಸಿತು. ಆ ಬಳಿಕ ಅಂತರರಾಷ್ಟ್ರೀಯ ಚಹಾ ದಿನವನ್ನು ಮೊದಲ ಬಾರಿಗೆ ಮೇ 21, 2020 ರಂದು ಆಚರಿಸಲಾಯಿತು.

ತಲೆ ನೋವು, ಒತ್ತಡ, ಟೆನ್ಷನ್ ಕಡಿಮೆ ಮಾಡಿ ಫ್ರೆಶ್‌ನೆಸ್ ಬೇಕು ಅನಿಸುವ ಪ್ರತಿಯೊಬ್ಬರಿಗೂ ಚಹಾ ಅದೆನೋ ಒಂದು ರೀತಿ ಮಾತ್ರೆ ಇದ್ದಂತೆ. ಇದನ್ನು ಕುಡಿದಾಗಲೇ ಕೆಲವರ ತಲೆ ಓಡೋದು. ಕಚೇರಿಗಳಲ್ಲಿ ಕೆಲ ಮಾಡುವವರಿಗಂತೂ ಕಡಿಮೆ ಅಂದರೂ ದಿನಕ್ಕೆ ಎರಡು ಬಾರಿ ಚಹಾ ಬೇಕೇ ಬೇಕು. ಅದೆಷ್ಟೇ ಒತ್ತಡದ ಕೆಲಸವಿದ್ದರು ಒಂದು ಬ್ರೇಕ್ ಹಾಕಿ ಚಹಾ ಕುಡಿದುಬಿಟ್ಟರೆ ಹೊಸ ಉಲ್ಲಾಸವೇ ಮೂಡುತ್ತದೆ. ಹೀಗೇ ಚಹಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಅಂತರರಾಷ್ಟ್ರೀಯ ಚಹಾ ದಿನದ ಶುಭಾಶಯಗಳು. ಪ್ರತಿ ವರ್ಷ ಮೇ 21 ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ಚಹಾ ಕಾರ್ಮಿಕರ ಸುರಕ್ಷಿತ ಕೆಲಸದ ಪರಿಸ್ಥಿತಿಗಳು, ನ್ಯಾಯಯುತ ವ್ಯಾಪಾರ ಮತ್ತು ಚಹಾ ಉತ್ಪಾದನೆಯನ್ನು ಸುಧಾರಿಸಲು ಸುಸ್ಥಿರ ವಾತಾವರಣದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ

ಏಲಕ್ಕಿ , ಶುಂಠಿ, ಚೆಕ್ಕೆ, ಲವಂಗ , ಜಾಕಾಯಿ, ಮೆಣಸಿನ ಕಾಳು , ಪುದೀನಾ, ಇನ್ನೂ ಏನೇನೋ ಹಸಿರು ಟೀ, herbal tea, jasmine tea, lemongrass tea ಕೊನೆಗೆ ಲಿಂಬೆಹಣ್ಣಿನ ಜೊತೆಗೂ ಹದವಾಗಿ ಬೆರೆಯುವ ಗುಣವಿರುವುದು ಈ ಟೀಗೆ ಮಾತ್ರ. ಸಕ್ಕರೆನೋ, ಬೆಲ್ಲನೋ ಒಟ್ಟಿನಲ್ಲಿ ಹೊತ್ತಲ್ಲದ ಹೊತ್ನಲ್ಲೂ ಜೊತೆಯಾಗಬಲ್ಲ ಸಂಗಾತಿ ಅಂದ್ರೆ ಅದು ‘ಟೀ’

ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ಉತ್ಪತ್ತಿಯಾಗುವ ಚಹಾ, ನೀರಿನ ನಂತರ ವಿಶ್ವದ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಚಹಾ ಸಸ್ಯದ ಬೆಳವಣಿಗೆಯ ನಿಖರವಾದ ಸ್ಥಳವು ಅನಿಶ್ಚಿತವಾಗಿದ್ದರೂ, ಚಹಾವು ಈಶಾನ್ಯ ಭಾರತ, ಉತ್ತರ ಮ್ಯಾನ್ಮಾರ್ ಮತ್ತು ನೈಋತ್ಯ ಚೀನಾದಲ್ಲಿ ಹುಟ್ಟಿಕೊಂಡಿತು ಎಂದು ಸಾಮಾನ್ಯವಾಗಿ ನಂಬಲಾಗಿದೆ.