ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆಯು ಪ್ರತಿಷ್ಟಿತ ಪ್ರಶಸ್ತಿ ಯಾದ “ಅಂತರಾಷ್ಟ್ರೀಯ ಉತ್ತಮ ದಂತ ಕಾಲೇಜು ಸಂಸ್ಥೆ ” ಯನ್ನು ಪರ‍್ರೆ ಫಾಚ್ರ‍್ಡ್ ಅಕಾಡೆಮಿ, ಏಷ್ಯಾ ವಿಭಾಗದಿಂದ ಪಡೆದುಕೊಂಡಿದೆ.
ಈ ಗೌರವಾನ್ವಿತ ಪ್ರಶಸ್ತಿಯನ್ನು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಯೆನೆಪೋಯ ದಂತ ಕಾಲೇಜು ನಡೆಸಿರುವ ದಂತ ವೈದ್ಯಕೀಯ ಶಿಕ್ಷಣ, ಸಂಶೋಧನೆ, ಸಮುದಾಯ ದಂತ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಡಾ. ಲಕ್ಷ್ಮಿ ಕಾಂತ್ ಚಾತ್ರ, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ” ಜೀವನ ಶ್ರೇಷ್ಠ ಸಾಧಕ “ಪ್ರಶಸ್ತಿ ಮತ್ತು ಡಾ. ಶಾಮ್ ಎಸ್ ಭಟ್, ಡೀನ್, ಫಾಕಲ್ಟಿಆಫ್ ಡೆಂಟಿಸ್ಟ್ರಿ, ಯೆನೆ ಪೋಯ ದಂತ ಕಾಲೇಜು “ಅತ್ಯುನ್ನತ ದಂತ ಶಿಕ್ಷಕ “ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಈ ಅತ್ಯುನ್ನತ ಪ್ರಶಸ್ತಿಯನ್ನು ಏಪ್ರಿಲ್ ೬,೨೦೨೫ ರಂದು ರಾಡಿಸನ್ ಹೋಟೆಲ್, ಕೊಲಂಬೊ, ಶ್ರೀಲಂಕಾ ದಲ್ಲಿ ನಡೆಯುವ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು. ಈ ಸಾಧನೆಗಾಗಿ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯವು ಹರ್ಷದೊಂದಿಗೆ ಸಾಧಕರಿಗೆ ಪ್ರಶಂಸೆ ಯನ್ನು ನೀಡಿದೆ.