ಟೆಲ್ ಅವಿವ್/ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ 7ನೇ ದಿನಕ್ಕೆ ಕಾಲಿಟ್ಟಿದ್ದು, ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಮಿಸೈಲ್ ದಾಳಿ ಮುಂದುವರಿದಿದೆ. ಇರಾನ್ ಟೆಲ್ ಅವಿವ್ ಮೇಲೆ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸ್ರೇಲ್ ಇರಾನಿನ ಅಣ್ವಸ್ತ್ರ ಘಟಕ ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ರೆ, ಇರಾನ್, ಇಸ್ರೇಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನಡುವೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ.
7ನೇ ದಿನ ಇರಾನ್ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗೆ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ʻಬೀರ್‌ಶೆಬಾದಲ್ಲಿರುವ ಸೊರೊಕಾʼ ಧ್ವಂಸವಾಗಿದೆ. ಇದರಲ್ಲಿ ಸಾವುನೋವಿನ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ : ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್
ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್, ಇರಾನ್‌ನ ಖೊಂಡಾಬ್ ಪರಮಾಣು ಘಟಕದ ಬಳಿಯಿರುವ ಭಾರೀ ನೀರಿನ ಸಂಪನ್ಮೂಲ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನ್ಯೂಕ್ಲಿಯರ್ ಘಟಕವೇ ಇಸ್ರೇಲ್‌ನ ಮುಂದಿನ ಟಾರ್ಗೆಟ್ ಆಗಿದೆ ಎಂದು ಹೇಳಲಾಗಿದೆ.
ಇನ್ನೂ ಇಸ್ರೇಲ್ ಬುಧವಾರ ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಯಾಸಿನ್ ಇಜ್ ಎ-ದಿನ್ ಅವರನ್ನ ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಬ್ಯಾರಿಶ್ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಹತ್ಯೆಗೈಯಲಾಗಿದೆ ಎಂದಿದೆ. ಯಾಸಿನ್ ಲಿಟಾನಿ ನದಿ ವಲಯದಲ್ಲಿರುವ ಹೆಜ್ಬೊಲ್ಲಾದ ರಾಕೆಟ್ ಫಿರಂಗಿ ಘಟಕದ ಕಮಾಂಡರ್ ಆಗಿದ್ದರು.