ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಯಗೊಂಡಿದ್ದ 8 ವರ್ಷದ ಹೆಣ್ಣು ಚೀತಾವೊಂದು ಸಾವನ್ನಪ್ಪಿದೆ.
8 ವರ್ಷದ ನಮೀಬಿಯಾದ ಹೆಣ್ಣು ಚೀತಾ ನಭಾ ಶನಿವಾರ ಸಾವನ್ನಪ್ಪಿದೆ. ಒಂದು ವಾರದ ಹಿಂದೆ ಬೇಟೆಯಾಡುವ ವೇಳೆ ಚೀತಾ ತೀವ್ರವಾಗಿ ಗಾಯಗೊಂಡಿತ್ತು. ಈ ವೇಳೆ ಎಡಭಾಗದ ಮೂಳೆ ಮುರಿತವಾಗಿತ್ತು. ಅಲ್ಲದೇ ಇತರ ಗಾಯಗಳಿದ್ದವು. ಚೀತಾಯನ್ನು ಚಿಕಿತ್ಸೆಗೊಳಪಡಿಸಲಾಗಿತ್ತು. ಆದರೆ ತೀವ್ರ ಗಾಯಗಳಾಗಿದ್ದರಿಂದ ಇಂದು ಸಾವನ್ನಪ್ಪಿದೆ. ಇದನ್ನೂ ಓದಿ : ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ – ಈಜಿ ಜೀವ ಉಳಿಸಿಕೊಂಡ ಪತಿ
ನಭಾ ಚೀತಾದ ಸಾವಿನ ನಂತರ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ 26 ಚೀತಾಗಳಿವೆ. ಇದರಲ್ಲಿ ಒಂಬತ್ತು ವಯಸ್ಕ ಚೀತಾಗಳು ಅಂದರೆ 6 ಹೆಣ್ಣು ಮತ್ತು 3 ಗಂಡು ಚೀತಾಗಳಿವೆ. ಅಲ್ಲದೇ ಕಾಂಚನ್ ಜುಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ 17 ಮರಿಗಳು ಸೇರಿವೆ. ಇವುಗಳಲ್ಲಿ 26 ಚೀತಾಗಳಲ್ಲಿ 16 ಚೀತಾಗಳು ಕಾಡಿನಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ