ನವದೆಹಲಿ: ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ನ ಫಾಲ್ಕನ್-9 ಉಪಗ್ರಹ ಬುಧವಾರ ಸಂಜೆ ಉಡಾವಣೆಗೊಳ್ಳಲಿದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಆರಂಭಿಸಲಿದ್ದಾರೆ. ಇದನ್ನೂ ಓದಿ :ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ- ಕರಾವಳಿ ಸೇರಿ ಇತರೆ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್

ಶುಕ್ಲಾ ಅವರ ಜೊತೆಗೆ ಇತರೆ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲು ಸಿದ್ಧರಾಗಿದ್ದಾರೆ. 1984 ರಲ್ಲಿ ಸೋವಿಯತ್ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ರಾಕೇಶ್ ಶರ್ಮಾ ಇತಿಹಾಸ ಬರೆದಿದ್ದರು. 41 ವರ್ಷಗಳ ನಂತರ ಶುಕ್ಲಾ ಅವರು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಲಕ್ನೋದವರಾದ ಶುಕ್ಲಾ, ಆಕ್ಸಿಯಮ್ ಸ್ಪೇಸ್ನ ಇಸ್ರೋ-ನಾಸಾ ಬೆಂಬಲಿತ ವಾಣಿಜ್ಯ ಬಾಹ್ಯಾಕಾಶ ಹಾರಾಟದ ಭಾಗವಾಗಿದ್ದಾರೆ. ಫ್ಲೋರಿಡಾದ ಕೆಎಸ್ಸಿಯ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಲಿಫ್ಟ್-ಆಫ್ ಮಾಡಲು ಹೊಂದಿಸಲಾದ ಆಕ್ಸಿಯಮ್-4 (ಆಕ್ಸ್-4) ಕಾರ್ಯಾಚರಣೆಯಲ್ಲಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಕ್ಲಾ, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.
ಭಾನುವಾರ ಉಡಾವಣೆಗೆ ಮುನ್ನ ಆಕ್ಸ್-4 ಸಿಬ್ಬಂದಿ ಮತ್ತು ಸ್ಪೇಸ್ಎಕ್ಸ್ ತಂಡಗಳು ಉಡಾವಣಾ ದಿನದ ಚಟುವಟಿಕೆಗಳ ಸಂಪೂರ್ಣ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿವೆ. ಇದು ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳ ಹೆಮ್ಮೆಯ ಜಾಗತಿಕ ಸ್ವೀಕೃತಿ. ಸ್ಥಾಪಕ ಪಿತಾಮಹರಾದ ವಿಕ್ರಮ್ ಸಾರಾಭಾಯ್ ಮತ್ತು ಸತೀಶ್ ಧವನ್ ಅವರಿಗೆ ಸಲ್ಲಿಸುವ ಗೌರವ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ಕಾರ್ಯಾಚರಣೆ ನಡೆಸುವ ‘ಆಕ್ಸ್ -4’ ಗಗನಯಾತ್ರಿಗಳು, ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಉದ್ಯಮದ ಪ್ರಮುಖರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.
ಆಕ್ಸಿಯಮ್ ಮಿಷನ್ 4 ನಲ್ಲಿನ ಶುಕ್ಲಾ ಅವರ ಅನುಭವವನ್ನು 2027 ಕ್ಕೆ ಯೋಜಿಸಲಾಗಿರುವ ಗಗನಯಾನ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಬಳಸಿಕೊಳ್ಳಲಾಗುವುದು. ಆಕ್ಸಿಯಮ್ -4 ಕಾರ್ಯಾಚರಣೆಗಾಗಿ ಇಸ್ರೋ 550 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಸ್ಪೇಸ್ಎಕ್ಸ್ಗೆ ಸೇರಿದ ಫಾಲ್ಕಂ 9 ರಾಕೆಟ್ ಈ ಗಗನನೌಕೆಯನ್ನು ಆಗಸಕ್ಕೆ ಹೊತ್ತಯ್ಯಲಿದೆ. ಆ್ಯಕ್ಸಿಯಮ್ ಮಿಷನ್-4, 28 ಗಂಟೆ ಕಾಲ ಆಗಸದಲ್ಲಿ ಪ್ರಯಾಣಿಸಿದ್ದು, ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದೆ. ಈ ಗಗನನೌಕೆಯಲ್ಲಿ ಶುಭಾಂಶು ಶುಕ್ಲಾ, ಅಮೆರಿಕಾ, ಹಂಗೇರಿ ಹಾಗೂ ಪೋಲೆಂಡ್ನ ನಾಲ್ವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬ್ಯಾಹಾಕಾಶಕ್ಕೆ ಪಯಣ ಬೆಳೆಸಿದ್ದಾರೆ. ಇಂದು ನಡೆಯಬೇಕಿದ್ದ ಈ ಉಪಗ್ರಹ ಉಡಾವಣೆ ನಾಳೆಗೆ ಹವಮಾನ ವೈಪರೀತ್ಯದಿಂದ ಮುಂದೂಡಲಾಗಿದೆ. 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯಲಿದೆ.