ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಭಾರತ (India), ಜಪಾನ್‌ನ್ನು (Japan) ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ (4th Largest Economy) ಹೊರಹೊಮ್ಮಿದೆ.

ಈ ಮಾಹಿತಿಯನ್ನು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಬಹಿರಂಗಪಡಿಸಿದ್ದಾರೆ. ಶನಿವಾರ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಭಾರತದ ಆರ್ಥಿಕತೆ ಈಗ 4 ಟ್ರಿಲಿಯನ್ ಡಾಲರ್ ಆಗಿದೆ. ಭಾರತ ಈಗ ಜಪಾನ್‌ಗಿಂತ ದೊಡ್ಡ ಆರ್ಥಿಕತೆ ಹೊಂದಿದೆ. ಇದಕ್ಕೆ ಅನುಕೂಲಕರವಾದ ಭೌಗೋಳಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಗಳೂ ಕಾರಣ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:“ಬಸವ ಜಯಂತಿ-2025” “ನಮ್ಮ ನಡೆ ಅನುಭವ ಮಂಟಪದ ಕಡೆ” ಕಾರ್ಯಕ್ರಮ ಉದ್ಘಾಟಿಸಿದ – ಸಿ.ಎಂ.

ಅಮೆರಿಕ, ಚೀನಾ ಮತ್ತು ಜರ್ಮನಿ ಬಳಿಕ ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ದೇಶೀಯ ಸುಧಾರಣೆಗಳು ಮತ್ತು ಭಾರತದ ಪರವಾಗಿ ಹೆಚ್ಚು ಹೆಚ್ಚು ಒಲವಿನಿಂದ ಆರ್ಥಿಕತೆ ಬಲಿಷ್ಠವಾಗಿದೆ. ನಾವು ನಮ್ಮ ಹಾದಿಯಲ್ಲಿಯೇ ಮುಂದುವರೆದರೆ, ಕೇವಲ 2.5 ರಿಂದ 3 ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ರಾಷ್ಟ್ರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್‌ಗಳನ್ನು ಅಮೆರಿಕದಲ್ಲೇ ತಯಾರಾಗಬೇಕು. ಭಾರತ ಅಥವಾ ಬೇರೆ ದೇಶಗಳಲ್ಲಿ ಅಲ್ಲ ಎಂಬ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸುಂಕದ ಬಗ್ಗೆ ಸ್ಪಷ್ಟತೆ ಇಲ್ಲ. ಭಾರತ ತಯಾರಿಕೆಗೆ ಅಗ್ಗದ ದೇಶವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಟ್ಟ, ನೀಲ ಕೂದಲು ನಿಮ್ಮದಾಗಬೇಕೆ ಬಳಸಿ ಭೃಂಗರಾಜ 

ಭಾರತ ಅತಿದೊಡ್ಡ ಆರ್ಥಿಕತೆಯಾದ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್ ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪಿಎಂ ಮೋದಿಯವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.