ಮಾಣಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆಯು ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆಯ ಶ್ರೀ ಗಣೇಶ ಸಭಾಭವನದಲ್ಲಿ ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಬೂತ್ ಚಲೋ ಜಿಲ್ಲಾ ಸಂಚಾಲಕರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಬಿಜೆಪಿ ಪ್ರಮುಖರಾದ ಮಾಧವ ಮಾವೆ, ಮಂಡಲ ಉಪಾಧ್ಯಕ್ಷರಾದ ಪುಷ್ಪರಾಜ್ ಚೌಟ ಮಾಣಿ, ರವೀಶ್ ಶೆಟ್ಟಿ ಕರ್ಕಳ, ರೇಷ್ಮಾ ಶಂಕರಿ, ಮಂಡಲ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ, ಮಂಡಲ ರೈತ ಮೋರ್ಚಾದ ಅಧ್ಯಕ್ಷರಾದ ಸನತ್ ಕುಮಾರ್ ರೈ ಅನಂತಾಡಿ, ಮಾಣಿ ಮಹಾಶಕ್ತಿ ಕೇಂದ್ರದ ಒಬಿಸಿ ಪ್ರಮುಖ್ ಶ್ರೀನಿವಾಸ್ ಪೂಜಾರಿ ಪೆರಾಜೆ ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮಾಣಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ ಕರಿಂಕ ಇವರು ಸ್ವಾಗತಿಸಿದರು, ಮಾಣಿ ಮಹಾಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಭವಾನಿ ಶೆಟ್ಟಿ ಮಾಣಿ ಇವರು ವಂದಿಸಿದರು.