ನಟಿ ಮೇಘನಾ ರಾಜ್ (Meghana Raj) ಪತಿಯೊಂದಿಗಿನ ಹಳೆಯ ಫೋಟೋಗಳನ್ನು ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಪ್ರತಿ ಜನ್ಮಕ್ಕೂ ಚಿರು ಬೇಕು ಎಂದಿದ್ದಾರೆ.

ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್ ಫೋಟೋ ಹಂಚಿಕೊಂಡ ಮೇಘನಾ
ಇದೀಗ ಪತಿ ಚಿರಂಜೀವಿ (Chiranjeevi Sarja) ಜೊತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ‘ಪ್ರತಿ ಜನ್ಮದಲ್ಲೂʼ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ‘ಪ್ರತಿ ಜನ್ಮಕ್ಕೂ ಚಿರುನೇ ಬೇಕು’ ಎಂಬರ್ಥದಲ್ಲಿ ಮೇಘನಾ ಬರೆದುಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ಮಾತನಾಡುವವರಿಗೆ ನಟಿ ತಿರುಗೇಟು ನೀಡಿದ್ದಾರೆ.
ಇದೀಗ ಹಲವು ವರ್ಷಗಳ ನಂತರ ಮೇಘನಾ ರಾಜ್ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳು ಅವರ ಕೈಯಲ್ಲಿವೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.
ಅಂದಹಾಗೆ, ಹಲವು ವರ್ಷಗಳಿಂದ ಪ್ರೀತಿಸಿ 2018ರಲ್ಲಿ ಚಿರಂಜೀವಿ ಸರ್ಜಾ ಜೊತೆ ಮದುವೆಯಾದರು. 2020ರಲ್ಲಿ ನಟ ಇಹಲೋಕ ತ್ಯಜಿಸಿದರು.
