ಮಂಡ್ಯ: ಎರಡು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ (Love Marriage) ಗೃಹಿಣಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಪಾಂಡವಪುರ (Pandavapura) ತಾಲೂಕಿನ ಕೆನ್ನಾಳುನಲ್ಲಿ ನಡೆದಿದೆ.

ಪೂಜಾ (25) ಸಾವಿಗೀಡಾದ ಗೃಹಿಣಿ. ಪೋಷಕರ ವಿರೋಧದ ನಡುವೆಯೂ ಕೆನ್ನಾಳು ಗ್ರಾಮದ ಅಭಿನಂದನ್ ಜೊತೆ ಪೂಜಾ ಮದುವೆಯಾಗಿದ್ದಳು. ಮದುವೆ ಬಳಿಕ ಗಂಡನ ಮನೆಯವರಿಂದ ಕಿರುಕುಳ ನೀಡಿದ್ದಾರೆ ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ.  ಇದನ್ನೂ ಓದಿ : ನಾನ್‌ವೆಜ್ ಪ್ರಿಯರೇ ಎಚ್ಚರ – ಬೆಂಗ್ಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್

ಗುರುವಾರ ರಾತ್ರಿ ಕೊಲೆ ಮಾಡಿ ನೇಣು ಬಿಗಿದಿದ್ದಾರೆ. ಗಂಡನೇ ಕೊಲೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎಂದು ಪೂಜಾ ಕುಟುಂಬಸ್ಥರು ದೂರಿದ್ದಾರೆ.  ಇದನ್ನೂ ಓದಿ : 21ನೇ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ 2025

ಪೂಜಾ ಮೃತಪಟ್ಟ ಬಳಿಕವೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ. ತಡ ಯಾಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಪೋಷಕರ ಪ್ರತಿಭಟನೆಯ ಬಳಿಕ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.