ಬೆಂಗಳೂರು: ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ (Serial Accident) ಸಂಭವಿಸಿದ್ದು, 7 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಕೋಟೆ (Hosakote) ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ನಡೆದಿದೆ. ಇದನ್ನೂ ಓದಿ: ಪ್ರೇಯಸಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಹೋಗಿದ್ದ ಗಂಡ – ಹೆಂಡತಿ ಕೈಗೆ ಸಿಕ್ಕಿಬಿದ್ದು, ದಿಕ್ಕಾಪಾಲಾಗಿ ಓಡಿದ

ಹೊಸಕೋಟೆ-ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಕ್ಯಾಂಟರ್, ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಒಂದೇ ಕಾರಿನಲ್ಲಿದ್ದ 6 ಜನ ಹಾಗೂ ಓರ್ವ ಬೈಕ್ ಸವಾರ ಸೇರಿ 7 ಮಂದಿ ಸ್ಥಳದಲ್ಲೇ ಜೀವಬಿಟ್ಟಿದ್ದಾರೆ.
ಅಪಘಾತಕ್ಕೀಡಾದ XUV 700 ಕಾರು ( ಸಂಖ್ಯೆ KA-03 NW-0138) ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುತ್ತಿತ್ತು. ಸದ್ಯ ಕಾರಿನಲ್ಲಿದ್ದ 6 ಜನ ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಸದ್ಯ ಮೃತದೇಹಗಳನ್ನ ಹೊಸಕೋಟೆಯ ಸರ್ಕಾರಿ ಆಸ್ವತ್ರೆಗೆ ರವಾನಿಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
