ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ. ಉಳ್ಳಾಲ ತಾಲೂಕಿನಾದ್ಯಂತ ನೂರಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಪ್ರತ್ಯೇಕ ಸ್ಥಳಗಳಲ್ಲಿ ಎರಡು ಮನೆಗಳ ಮೇಲೆ ಗುಡ್ಡ ಕುಸಿದು, ಮಣ್ಣಿನಡಿ ಸಿಲುಕಿದ್ದ ಒಟ್ಟು ಆರು ಮಂದಿಯಲ್ಲಿ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಉಳಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಮೊಂಟೆಪದವು ಬಳಿ ಗುಡ್ಡ ಕುಸಿದು ಐವರು ಸಿಲುಕಿದ್ದರು. ಅವರ ಪೈಕಿ ಪ್ರೇಮಾ ಪೂಜಾರಿ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ : ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರು, ಅಂಬಿಕಾ ರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳಲ್ಲಿ ನೂರರಷ್ಟು ಮನೆಗಳು ಜಲಾವೃತಗೊಂಡಿವೆ

.ದೇರಳಕಟ್ಟೆ ಕಾನಕೆರೆ ನಿವಾಸಿ ಫಾತಿಮ ನಯೀಮ ಮೃತಪಟ್ಟಿದ್ದಾರೆ. ದೇರಳಕಟ್ಟೆ ಕಾನಕೆರೆ ಬಳಿ ನೌಶದ್ ಎಂಬವರ ಮನೆಗೆ ತಡೆಗೋಡೆ ಕುಸಿದು ಫಾತಿಮಾ ನಯೀಮಾ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.

ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆ  ಅಂಗನವಾಡಿ ಹಾಗೂ ಒಂದರಿಂದ ಹತ್ತನೇ ತರಗತಿವರೆಗೆ( ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ) ಇಂದು ದಿನಾಂಕ 30-5-2025 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.  ಇದನ್ನೂ ಓದಿ :ಇರಾನ್‌ನಲ್ಲಿ ಭಾರತದ ಮೂವರು ಯುವಕರ ಕಿಡ್ನ್ಯಾಪ್ – ಬಿಡುಗಡೆಗೆ 1 ಕೋಟಿ ಡಿಮ್ಯಾಂಡ್‌