ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ ವತಿಯಿಂದ ಬಂಟ್ವಾಳ ತಾಲೂಕಿನ ಗೋಳ್ತಮುಜಲ್ ಗ್ರಾಮದ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಜಾತ್ರೋತ್ಸವದಲ್ಲಿ ನಿಟಿಲಾಪುರದಿ ಸೇವಾವಾರಿದಿ ಮೂಲಕ ಸಂಗ್ರಹಿಸಲ್ಪಟ್ಟ ರೂಪಾಯಿ 88,101/- ಸೇವಾನಿಧಿಯನ್ನು ಕ್ಷೇತ್ರದಲ್ಲಿ ಪ್ರಮುಖರ ಸಮ್ಮುಖ ಫಲಾನುಭವಿಗಳಾದ ಆರುಷಿ ನೆಟ್ಲ ಅವರಿಗೆ 30,000 /-, ನಂದಕಿಶೋರ್ ಮಾಣಿಮಜಲ್ ಅವರಿಗೆ 25000/-, ಸಂತೋಷ್ ಕಲ್ಲಡ್ಕ ರವರಿಗೆ 25000/-, ಕಾರ್ಯಕರ್ತರ ಕ್ಷೇಮ ನಿಧಿಗೆ 8101/-, ನ್ನು ಹಸ್ತಾಂತರಿಸಲಾಯಿತು.
ಫಲಾನುಭವಿಗಳು ಯುವಶಕ್ತಿ ಸೇವಾ ಪಥದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಶಕ್ತಿ ಸೇವಾ ಪಥದ ಆಶ್ರಯದಲ್ಲಿ ಸಮಾಜದಿಂದ ಸಮಾಜಕ್ಕೆ ಈತನಕ ಸುಮಾರು 70 ಲಕ್ಷ ರೂಪಾಯಿಯನ್ನು ವಿವಿಧ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.