ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾ ಕಚೇರಿಯ ತುಂಬೆ ವಲಯ ವ್ಯಾಪ್ತಿಗೆ ಸೇರಿದ ನರಿಕೊಂಬು ಗ್ರಾಮದ ಶ್ರೀ ಮಹಮ್ಮಾಯಿ ಸನ್ನಿಧಿ ಅಬ್ಬೆಯಮಜಲು ಇಲ್ಲಿನ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1ಲಕ್ಷ ಸಹಾಯಧನ ಮಂಜೂರಾಗಿದ್ದು ಸಹಾಯಧನದ ಚೆಕ್ಕನ್ನು ಬ್ರಹ್ಮ ಕಲಶೋತ್ಸವ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್, ಯೋಜನೆಯ ನರಿಕೊಂಬು ಎ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ, ಬಿ ಒಕ್ಕೂಟ ಅಧ್ಯಕ್ಷ ಜಯಂತ, ನರಿಕೊಂಬು ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ವಿಮಾ ಸಮನ್ವ್ಯಾಧಿಕಾರಿ ಹೇಮಲತಾ ಹೆಗ್ಡೆ ,ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ,ಮಹಮ್ಮಾಯಿ ಸನ್ನಿಧಿ ಅಬ್ಬೆಯಮಜಲು ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀಶ ರಾಯಸ, ಟ್ರಸ್ಟಿಗಳಾದ ಉದಯಕುಮಾರ್ ಶೆಟ್ಟಿ, ಮಾಧವ ಅಂಚನ್, ಗೋಪಾಲ ಅಂಚನ್, ವಾಮನ ಪೂಜಾರಿ, ಯತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಮಹಿಳಾ ಸಮಿತಿಯ ಶೀಲಾವತಿ, ಶೋಭಾ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.