ಬಂಟ್ವಾಳ: ರಾಷ್ಟೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಮತ್ತು ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇವರ ಜನ್ಮಶತಾಬ್ದಿಯ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಇದರ ವತಿಯಿಂದ ಕಾಡಬೆಟ್ಟು ಗ್ರಾಮದ ಕೆಳಗಿನ ವಗ್ಗ ಎಂಬಲ್ಲಿ ಲತಾ ಪೂಜಾರಿ, ಕೆರೆಕೋಡಿ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆ “ಶ್ರೀರಾಮ ಕಾರುಣ್ಯ” ಇದರ ಹಸ್ತಾಂತರ ಮತ್ತು ಗೃಹ ಪ್ರವೇಶ ಕಾರ್ಯಕ್ರಮವನ್ನು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್ ಅವರು ದೀಪಾ ಪ್ರಜ್ವಲಿಸುವ ಮೂಲಕ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾನಾಡಿದ ಅವರು ಸಂಘದ ಸ್ವಯಂಸೇವಕರ ಯೋಚನೆಗೆ ಊರವರ ಸಹಕಾರದಿಂದ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿ ಸೂರು ನಿರ್ಮಾಣ ಮಾಡುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿ, ರಾಷ್ಟ್ರೀಯ ಸ್ಚಯಂ ಸೇವಕ ಸಂಘದ ಶಾತಾಬ್ದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿಯ ಪ್ರಯುಕ್ತ ಸೇವಾ ಚಟುವಟಿಕೆಗಳ ಸಹಿತ ಬೇರೆ ಬೇರೆ ಕಾರ್ಯಕ್ರಮವನ್ನು ಮಾಡಲು ಬಿಜೆಪಿಯ ಹಿರಿಯರು ಯೋಚನೆ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಸರಕಾರ ಆಡಳಿತದ ಅವಧಿಯಲ್ಲಿ ರೈತರಿಗೆ ನೀಡಿದ ಜನಪರವಾದ ಯೋಜನೆಯನ್ನು ಈವರೆಗೆ ಬಂದ ಯಾವ ಸರಕಾರ ನೀಡಿಲ್ಲ ಎಂಬುದನ್ನು ತಿಳಿಸಿದ ಅವರು,ಈ ಬಾರಿ ಸಹಕಾರಿ ಸಂಘಗಳ ಚುನಾವಣೆಗೆ ಬಿಜೆಪಿ ವಿಶೇಷ ಮಹತ್ವ ನೀಡಿದೆ ಎಂಬುದನ್ನು ಉಲ್ಲೇಖ ಮಾಡಿದರು.
ಮನೆ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ ಮಹನೀಯರನ್ನು ಗುರುತಿಸಿ ಗೌರವಿಸಲಾಯಿತು. ಬಿಜೆಪಿ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಲಕ್ಮೀನಾರಾಯಾಣ ಶರ್ಮ, ಕಾವಳ ಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ,ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಕಾರ್ಯಕ್ರಮದ ರೂವಾರಿ ಸಹಕಾರಿ ಪ್ರಕೋಷ್ಟದ ಸಂಚಾಲಕ ಜಯರಾಮ ರೈ ಉಪಸ್ಥಿತರಿದ್ದರು. ಪ್ರಮೋದ್ ರೈ ಕಾಡುಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ರಿತೇಶ್ ವಂದಿಸಿದರು. ಕು.ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.