ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ನರಿಕೊಂಬು ಶಕ್ತಿ ಕೇಂದ್ರ 117ನೇ ಬೂತ್ ವತಿಯಿಂದ ಗುರುವಂದನಾ ಕಾರ್ಯಕ್ರಮ ಅಂಗವಾಗಿ ಗುರುಗಳನ್ನು ಗುರುತಿಸಿ ಅವರ ಮನೆಗೆ ಹೋಗಿ ಗೌರವಿಸುವ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.  ಇದನ್ನೂ ಓದಿ : ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ

ನರಿಕೊಂಬು ಗ್ರಾಮದ ಎಲಬೆ ಪೂವಪ್ಪ ಪೂಜಾರಿಯವರ ಮಗಳಾದ ಶಿಕ್ಷಕೀ ಅಶ್ವಿನಿ ವಿವೇಕ್ ಇವರನು ಫಲಪುಷ್ಪ ಹಾಗೂ ಹೂಗುಚ್ಚೆ ನೀಡಿ ಶಾಲುಹೋದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ನರಿಕೊಂಬು ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಪುರುಷೋತ್ತಮ ಸಾಲ್ಯಾನ್, ಬೂತ್ ಅಧ್ಯಕ್ಷರದ ಸುರೇಶ್ ಕುಲಾಲ್ ಶೇಡಿಗುರಿ, ಬೂತ್ ಕಾರ್ಯಧರ್ಶಿ ನಾಗರಾಜ್ ಎಲಬೆ, ದಕ್ಷಿಣಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಶಾಲಾಭಿವೃದ್ಧಿಸಮಿತಿ ಸದಸ್ಯರದ ಕಮಲಾಕ್ಷ ಭೀಮಗದ್ದೆ, ಪಕ್ಷದ ಪ್ರಮುಖರಾದ ಲೋಕೇಶ್ ಕಟ್ಟದಮುದೇಲು, ನವೀನ್ ಎಲಬೆ, ದಿರಾಜ, ಆಶಾ ಕಮಲಾಕ್ಷ,ರೇವತಿ ಪೂವಪ್ಪ ಪೂಜಾರಿ ಇತರರು ಉಪಸ್ಥಿತರಿದ್ದರು.