ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಗುರುಪೂರ್ಣಿಮೆ”ಯನ್ನುಆಚರಿಸಲಾಯಿತು.

ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರು, ಕರ್ನಾಟಕ ಪರಿಷತ್ತಿನ ಮಾಜಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್‌ ಗುರು ಪೂರ್ಣಿಮೆಯ ಮಹತ್ವ ತಿಳಿಸುತ್ತಾ, “ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ‘ಮನೆಯೇ ಮೊದಲ ಪಾಠ ಶಾಲೆ,ಜನನಿ ತಾನೆ ಮೊದಲ ಗುರು’ ಎಂಬ ಮಾತಿನಂತೆ ತಂದೆತಾಯಿ ಮೊದಲ ಗುರುಗಳು. ವೇದವ್ಯಾಸರು ಹುಟ್ಟಿದ ದಿನವನ್ನುಗುರುಪೂರ್ಣಿಮೆ ದಿನವನ್ನಾಗಿಆಚರಿಸುತ್ತಾರೆ. ವೇದಗಳನ್ನು , ಉಪನಿಸತುಗಳನ್ನು ಮತ್ತು ಪುರಾಣಗಳನ್ನು ಆರಾಧಿಸಿದ ವೇದವ್ಯಾಸರನ್ನು ಮಾನವಗುರು ಎಂದು ಕರೆಯುತ್ತಾರೆ. ಗುರುಗಳು ಎಂದರೆ ನಮ್ಮನ್ನುತಿದ್ದಿತೀಡಿ ಸರಿಯಾದದಾರಿಯನ್ನುತೋರುವವರು.ನಮ್ಮಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನಮ್ಮಲ್ಲಿ ಮೂಡಿಸುವವರು.ಗುರುಗಳು ನಮ್ಮ ಪಾಲಿನ ದೇವರು.ಅವರನ್ನು ಗೌರವಿಸಿ.ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲಜೀವನದಲ್ಲಿ ಸರಿಯಾದದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ. ನೀವೂ ಕೂಡ ನಿಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ” ಎಂದುಮಕ್ಕಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ರಾಷ್ಟ್ರೀ ಯ ಸೇವಿಕಾ ಸಮಿತಿಯ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್‌ ಕಲ್ಲಡ್ಕ, ಶಾಲೆಯ ಮುಖ್ಯೋಪಾಧ್ಯಾಯರು ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ಇದನ್ನೂ ಓದಿ : ಕಟ್ಟೆಮಾರ್ ಶ್ರೀ ಮಂತ್ರದೇವತಾ ಜನಾ ಸೇವಾ ಟ್ರಸ್ಟ್ ವತಿಯಿಂದ ಮಗುವಿನ ಚಿಕಿತ್ಸೆಗೆ ಸಹಾಯಹಸ್ತ

ಕಾರ್ಯಕ್ರಮದ ಮೊದಲಿಗೆ ಭಾರತ ಮಾತೆಗೆ ದೀಪಪ್ರಜ್ವಲನೆ ಮಾಡಲಾಯಿತು. ನಂತರ ಅತಿಥಿಗಣ್ಯರಿಗೆ ಪುಸ್ತಕ ನೀಡಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಲಾಸ್ಯ ಮತ್ತು ಮಾಯಲಕ್ಷ್ಮೀ  ಪೇರಣಾಗೀತೆ ಹಾಡಿದರು. ತಬಲದಲ್ಲಿ ೭ನೇ ತರಗತಿಯ ವಿಘ್ನೇಶ್ ಸಹಕರಿಸಿದರು. ನಂತರ ೭ನೇ ತರಗತಿಯ ಸಾನ್ವಿ ವೇದಮಂತ್ರವನ್ನು ಹಾಗೂ ಧನ್ಯಆರ್‌ಅಮೃತವಾಚನಂವನ್ನು ವಾಚಿಸಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರೀರಾಮ ಸ್ವಾಗತಿಸಿ, ಮನ್ವಿತ್‌ಕುಲಾಲ್‌ನಿರೂಪಿಸಿ, ಸಮೃದ್ಧಿ ವಂದಿಸಿದರು.