ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ಗೊಳ್ತಾಮಾಜಲ್ ಮಹಾ ಶಕ್ತಿ ಕೇಂದ್ರದ ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಗುರುಪೂಜೆ ಮತ್ತು ಗುರುದಕ್ಷಿಣೆ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ಮಾರ್ಗದರ್ಶಕರಾದಂತಹ ನಮಗೆ ಗುರುಗಳಂತಿರುವ ಡಾಕ್ಟರ್ ಕಮಲ ಪ್ರಭಾಕರ್ ಭಟ್ ಅವರನ್ನು ಬಾಗಿನ ಕೊಟ್ಟು ಗೌರವಿಸಿದೆವು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಖಿತ ಆರ್ ಶೆಟ್ಟಿ, ಮಂಡಲದ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿ ಜಯಶ್ರೀ, ಮಹಾ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಲೀಲಾವತಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ರೇಣುಕ ಬೂತ್ ಪ್ರಮುಖರಾದ ವಿದ್ಯಾಶ್ರೀ ಮತ್ತು ಉಷಾ ಕೃಷ್ಣಕೋಡಿ, ಮತ್ತುಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.