ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಗ್ರಾಮ ದೈವಗಳಾದ ಶ್ರೀ ಗಿಳಿಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವ ಮಾ. 1 ಮತ್ತು ಮಾ. 2 ನಡೆಯಲಿರುವುದು.

ಜಾತ್ರಾ ಮಹೋತ್ಸವ ಪ್ರಯುಕ್ತ ಫೆ. 23 ಗೊನೆ ಮುಹೂರ್ತ ನಡೆಯಿತು.

ಜಾತ್ರೋತ್ಸವದ ಕಟ್ಟುಪಾಡಿನಂತೆ ಫೆ. 23 ರಿಂದ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಲಾಗುದು. ಮಾ. 2 ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಬಂದು ಬಳಿಕ ಗಣಹೋಮ ಹಾಗೂ ಶ್ರೀ ನಾಗರಕ್ತೇಶ್ವರಿ ಸಾನಿಧ್ಯದಲ್ಲಿ ತಂಬಿಲ ಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂಪರ್ಪಣೆ ನೆರವೇರಲಿದೆ.

ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಿದ ಬಳಿಕ ಮೂಲಸ್ಥಾನದಲ್ಲಿ ತಂಬಿಲ ಸೇವೆ ಜರಗಲಿರುವುದು.

ರಾತ್ರಿ ಏಳು ಗಂಟೆಗೆ ಸರಿಯಾಗಿ ಶ್ರೀ ಉಳ್ಳಾಕುಲು ದೈವಗಳ ಕೆರೆ ನೇಮೋತ್ಸವ ಮತ್ತು ಶ್ರೀ ಗಿಳಿಕಿಂದಾಯ ದೈವದ ನೇಮೋತ್ಸವ ಜರಗಳಿದೆ.

ಮಾ. 2 ಶನಿವಾರ ಬೆಳಿಗ್ಗೆ 10 ಗಂಟೆಗೆ ದೈವಗಳಿಗೆ ಹೂವಿನ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದು, ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಿದ ನಂತರ ರಾತ್ರಿ ಗಂಟೆ 7:00 ಕ್ಕೆ ಸರಿಯಾಗಿ ಶ್ರೀ ಉಳ್ಳಾಕುಲು ದೈವದ ವಲಸರಿ ಉತ್ಸವ ಮತ್ತು ಶ್ರೀ ಗಿಳಿಕಿಂದಾಯ ದೈವದ ಹರಕೆ ನೇಮೋತ್ಸವ ಜರಗಲಿರುವುದು.

ಮಾ. 4 ರಂದು ಶ್ರೀ ಸತ್ಯದೇವತೆ ಮತ್ತು ಪರಿವಾರದ ದೈವಗಳಿಗೆ ನೇಮೋತ್ಸವ ಜರಗಳಿರುವುದು.