ಬಂಟ್ವಾಳ : ಕ್ರೀಡಾಕೂಟ ಆಯೋಜನೆ ಇಂದ ಉಳಿಕೆ ಆಗುವ ಮೊತವನ್ನು ಪರಿಸರದ ಅನಾರೋಗ್ಯ ಪೀಡೆತರಿಗೆ,ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೀಡಿ ಅವರ ಬಾಳಲ್ಲಿ ಬೆಳಕಾಗಿ.ಎಂದು ನರಿಕೊಂಬು ರಾಯರ ಮನೆಯ ಅನುಪಮಾ ಆರ್ ರಾವ್ ಹೇಳಿದರು.

ಅವರು ಶ್ರೀ ಗುರು ಗೆಳೆಯರ ಬಳಗ ಕೊಪ್ಪಲಕೋಡಿ ನರಿಕೊಂಬು ಇದರ ವತಿಯಿಂದ ನಡೆದ ಪುರುಷರ ಗ್ರಾಮ ಸೀಮಿತ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಗುರು ಟ್ರೋಪಿ – 2025 ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕೈತಾಯ ಪಂಚರ್ಲಿ ದೇವಸ್ಥಾನ ನರಿಕೊಂಬು ಇದರ ಅಧ್ಯಕ್ಷರಾದ ಜಗನ್ನಾಥ್ ಬಂಗೇರ ನಿರ್ಮಾಲ್ ವಹಿಸಿ ಮಾತನಾಡಿ ಕ್ರೀಡೆಯ ಜೊತೆಗೆ ಊರಿನ ಸಾಧಕರನ್ನು ಗುರುತಿಸಿ ಅಭಿನಂದಿಸಿದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಅಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಕರ್ನಾಟಕ ಬ್ಯಾಂಕ್ ಅಧಿಕಾರಿ ಕ್ರೀಡಾಕೂಟ ಮೈದಾನದ ಮಾಲಕರು ನರಿಕೊಂಬು ರಾಯರ ಮನೆಯ ಶ್ರೀ ರಮೇಶ್ ರಾವ್ ಮಾಡಿದರು.

ಮಾಜಿ ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೇಮನಾಥ್ ಶೆಟ್ಟಿ ಅಂತರ ಮಾತನಾಡಿ ಹಿಂದೆ ಕಬ್ಬಡಿ ಪಂದ್ಯಾಟದಲ್ಲಿ ತಂಡಗಳು ಶಕ್ತಿಯಿಂದ ಗೆಲ್ಲುತ್ತಿತ್ತು ಆದರೆ ಈಗ ಯುಕ್ತಿಯೇ ಕಬಡ್ಡಿ ಪಂದ್ಯಾಟದಲ್ಲಿ ಗೆಲುವಿಗೆ ಪ್ರಾಮುಖ್ಯತೆ ವಹಿಸುತ್ತದೆ ಎಂದರು.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಗ್ರಾಮಸೀಮಿತ ಕಬಡ್ಡಿ ಪಂದ್ಯಾಟ ಅನ್ನೋದು ಒಂದು ಅರ್ಥಪೂರ್ಣವಾಗಿದೆ. ಗ್ರಾಮ ಮಟ್ಟದಲ್ಲಿ ಉತ್ತಮ ಕಬಡ್ಡಿ ಆಟಗಾರರು ಸೃಷ್ಟಿಯಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನರಿಕೊಂಬು ಶಾಲಾ ಶಿಕ್ಷಕಿ ಶೋಭಾ ಟೀಚರ್, ನಾಟಿವೈದ್ಯ ಗೀತಾ ಪದ್ಮನಾಭ ನಾಟಿ, ಚಿತ್ರಕಲಾವಿದ ಸುರೇಶ್ ನಿನ್ನಿಪಡಿಪು, ವಿದ್ಯಾರ್ಥಿಗಳಾದ ಶ್ರೀಜಾ ಅಬೇರೊಟ್ಟು, ಶ್ರದ್ಧ,ದೋಟ ಕೀರ್ತಿರಾಜ್ ದೋಟ , ರವರನ್ನು ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಗುರು ಗೆಳೆಯರ ಬಳಗದ ಅಧ್ಯಕ್ಷ ಸೀತಾರಾಮ್ ಸುವರ್ಣ ದೋಟ,ಹಿಂದುಳಿದ ವರ್ಗಗಳ ಮೋರ್ಚ ಬಿಜೆಪಿ ಬಂಟ್ವಾಳ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು , ಮೂರ್ತದಾರ ಸೇವಾ ಸಹಕಾರಿ ಸಂಘ ನಿಯಮಿತ ಶಂಬೂರ್ ಅಧ್ಯಕ್ಷರಾದ ಪುರುಷೋತ್ತಮ ಸಾಲಿಯಾನ್, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಂಜಿತ್ ಕೆದ್ದೇಲ್, ಚೇತನ್ ಏಲಭೆ, ಉದ್ಯಮಿ ಕಿರಣ್ ಅಟ್ಳೂರು, ಶ್ರೀನಿಧಿ ಬ್ಯಾಟರಿಎಸ್ ಮಾಲಕ ಚಂದ್ರಶೇಖರ್ ಪೂಜಾರಿ ಕೊರ್ಯ, ಇಂಜಿನಿಯರ್ ಮನೋಜ್ ಕೇದಿಗೆ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಗುರು ಗೆಳೆಯರ ಬಳಗದ ಸಂಚಾಲಕರಾದ ರವಿ ಅಂಚನ್ ಸ್ವಾಗತಿಸಿ, ರಮೇಶ್ ಪೂಜಾರಿ ದೋಟ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.