ವಿಟ್ಲ : ಬಂಟ್ವಾಳ ತಾಲೂಕಿನ ದ ಕ ಜಿ ಪ ಹಿ ಪ್ರಾ ಶಾಲೆ ಪಡಿಬಾಗಿಲು ಇಲ್ಲಿ ಸರಕಾರದಿಂದ ಮಕ್ಕಳಿಗೆ ಕೊಡುವ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮನಡೆಯಿತು
ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವ ಮೈರ ರವರ ಅಧ್ಯಕ್ಷತೆಯಲ್ಲಿ ಜರಗಿತು.  ಇದನ್ನ ಓದಿ :ಕೆಲಿಂಜ ಹಿ.ಪ್ರಾ.  ಶಾಲಾ ಪ್ರಾರಂಭೋತ್ಸವ

ಈ ಸಂದರ್ಭದಲ್ಲಿ ಕೇಪುಗ್ರಾಮ ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಯವರು ತಮ್ಮ ಕೊಡುಗೆಯಾಗಿ ಹೊಸದಾಗಿ ದಾಖಲಾದ ಮಕ್ಕಳಿಗೆ ಕುಡಿಯುವ ನೀರಿನ ಬಾಟಲಿಯನ್ನು ನೀಡಿ ಸಹಕರಿಸಿದರು.
ವಿದ್ಯಾಸಿರಿ ಟ್ರಸ್ಟ್ ಅಧ್ಯಕ್ಷ ರಾದ ಪ್ರಭಾಕರ್ ಶೆಟ್ಟಿ, , ಅಡ್ಯನಡ್ಕ ಪ್ರಾಥಮಿಕ ಆರೋಗ್ಯಕೇಂದ್ರದ ಸಹಾಯಕಿ ಮಮತ ಸಿಸ್ಟರ್, ಆಶಾ ಕಾರ್ಯಕರ್ತೆ ರಮ್ಯಾ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸವಿತಾ, ಸದಸ್ಯರಾದ ಶಶಿಕಲಾ, ಜಲಜಾಕ್ಷಿ, ದುರ್ಗಮ್ಮ, ಸರಸ್ವತಿ,ಲೀಲಾ, ವಿಜಯಕುಮಾರ್,ಜ್ಯೋತಿ ಲಕ್ಷ್ಮಿ ಉಪಸ್ಥಿತರಿದ್ದರು.  ಇದನ್ನೂ ಓದಿ : ಆರ್‌ಸಿಬಿ ಟೀಶರ್ಟ್‌ನಿಂದ ಮೃತ ಪತ್ನಿಯ ಗುರುತು ಪತ್ತೆ ಮಾಡಿದ ಪತಿ

ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಕೆ ರೈ ಸ್ವಾಗತಿಸಿ, ಜಯಶ್ರೀ ವಂದಿಸಿದರು, ಸಹಶಿಕ್ಷಕಿ ಲಲಿತ ಕಾರ್ಯಕ್ರಮ ನಿರೂಪಿಸಿದರು.