ಅಮ್ಟೂರು ಶ್ರೀಕೃಷ್ಣ ಮಂದಿರದ ಪ್ರಾಯೋಜಕತ್ವದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಫೆ.11ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ನಡೆಯಿತು.
ಮಾರ್ನಬೈಲ್ ಸುರಭಿ ಬಾರ್ ಮತ್ತು ರೆಸ್ಟೋರೆಂಟ್ನ ಮಾಲಕರಾದ ರತ್ನಾಕರ ಪೂಜಾರಿ ಪಡೀಲ್ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪಿಡಬ್ಯುಡಿ ಇಂಜಿನಿಯರ್ ಶ್ರೀನಿವಾಸ ಪಾದೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರೋಗ್ಯ ಅಧಿಕಾರಿ ರಾಮಚಂದ್ರ ಶಿಬಿರದ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮಂದಿರದ ಅಧ್ಯಕ್ಷ ರಮೇಶ್ ಕರಿಂಗಾಣ, ಅರ್ಚಕ ಮೋಹನ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು, ಕೋಶಾಧಿಕಾರಿ ಜಿತೇಶ್ ಶೆಟ್ಟಿ ಬಾಳಿಕೆ, ಉಪಾಧ್ಯಕ್ಷರುಗಳಾದ ಶರತ್ಕುಮಾರ್ ಅಮ್ಟೂರು, ಕೌಶಿಲ್ ಶೆಟ್ಟಿ ಬಾಳಿಕೆ, ಮಹಾಬಲ ಕುಲಾಲ್ ಕಾರ್ಯದರ್ಶಿ ರೋಹಿತ್ ಪ್ರಮುಖರಾದ ದಿವಾಕರ ಪಡೀಲ್, ಗೋಪಾಲ ಪೂಜಾರಿ, ಸುರೇಂದ್ರ ಪೊಯ್ಯಕಂಡ, ಸತೀಶ್ ಪೊಯ್ಯಕಂಡ, ಶ್ರೀಧರ ಸುವರ್ಣ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.