ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ವತಿಯಿಂದ ಬೆಂಗಳೂರಿನ ಗಾಂಧಿನಗರದಲ್ಲಿ ಇಂದು ‘ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಅಕಾಡೆಮಿಯ ನೂತನ ಕಟ್ಟಡ’ ಹಾಗೂ ‘ಬೆಂಗಳೂರು ಕೇಂದ್ರ ಕಾರಾಗೃಹದ ಹೊರ ಆವರಣದಲ್ಲಿ ಕಾರಾಗೃಹ ಸಿಬ್ಬಂದಿಗಳಿಗೆ 128 ವಸತಿ ಗೃಹಗಳ ಉದ್ಘಾಟನೆ’ ಮತ್ತು ‘ಕಾರಾಗೃಹ ಪ್ರಧಾನ ಕಚೇರಿಯ ಅನೆಕ್ಸ್ ಬಿಲ್ಡಿಂಗ್ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ’ ಹಾಗೂ ಕೋರಮಂಗಲದಲ್ಲಿ ನೂತನವಾಗಿ ನಿರ್ಮಿಸಿರುವ ‘ಕೆಎಸ್‌ಆರ್‌ಪಿ ಸಮುದಾಯ ಭವನ ಉದ್ಘಾಟನೆ’ಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ  ನೆರವೇರಿಸಿದರು. ಇದನ್ನೂ ಓದಿ : Aadhar Alert: 7 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್‌ ಅಪ್ಡೇಟ್‌ಗೆ ಪ್ರಕಟಣೆ: ಮಾಡದಿದ್ದರೆ ಆಧಾರ್‌ ರದ್ದು
ಈ ಸಂದರ್ಭದಲ್ಲಿ  ಗೃಹ ಸಚಿವ ಡಾ| ಜಿ.ಪರಮೇಶ್ವರ್‌ʻ  ಸಚಿವರಾದ ರಾಮಲಿಂಗರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಗೃಹ ಇಲಾಖೆಯ ಆಪ್ತಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಅವರು ಇದ್ದರು.