ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.) ಮತ್ತು ಮಹಿಳಾ ಘಟಕ ಇದರ ಕುಲಾಲ ಸಮುದಾಯ ಭವನದ ಶಿಲನ್ಯಾಸ ಕಾರ್ಯಕ್ರಮ ದಿನಾಂಕ 4-5-2025 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9 ರಿಂದ ನೆರವೇರಲಿರುವುದು.

ಬೆಳಿಗ್ಗೆ ಗಂಟೆ 9 ಕ್ಕೆ ಆಕರ್ಷಕ ಕೀಲುಕುದುರೆ, ಗೊಂಬೆ ಕುಣಿತ, ಕೇರಳದ ಚೆಂಡೆ ವಾದ್ಯ, ಕುಣಿತ ಭಜನಾ ತಂಡ ಹಾಗೂ ಪೂರ್ಣ ಕುಟುಂಬದೊಂದಿಗೆ ಅದ್ದೂರಿಯ ಮೆರವಣಿಗೆ ನಡೆದು ಮಾಣಿಲ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಸಮುದಾಯ ಭವನದ ಶಿಲನ್ಯಾಸ ಕಾರ್ಯಕ್ರಮ ನಡೆಯಲಿದ್ದು, ನಂತರ ನರಿಕೊಂಬು ಕುಂಬಾರ ಯಾನೆ ಕುಲಾಲರ ಸಂಘದ ಅಧ್ಯಕ್ಷರಾದ ಎಂ ಪಿ ಸುಂದರ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಮಾಡಲಿದ್ದು. ಪರಮಪೂಜ್ಯ ಮೋಹನ್ ದಾಸ್ ಸ್ವಾಮೀಜಿ ಆಶೀರ್ವಚನ ನೀಡಲಿರುವರು.

ಈ ಕಾರ್ಯಕ್ರಮದ ನಿಮಿತ್ತ ಗುರುಗಳಾದ ವಿದುಷಿ ನಾಯನ ಸತ್ಯನಾರಾಯಣ ಹಾಗೂ ವಿದುಷಿ ಅಶ್ವಿನಿ ಹೊಳ್ಳ ರವರ ಶಿಷ್ಯರಿಂದ ಭರತನಾಟ್ಯ, ವಿಠಲ ನಾಯಕ್ ರವರಿಂದ ಗೀತಾ -ಸಾಹಿತ್ಯ, ಸಂಭ್ರಮ ಜರಗಲಿರುವುದು. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.

ಸಾಯಂಕಾಲ ಗಂಟೆ 3ಕ್ಕೆ ಸರಿಯಾಗಿ ಮಕ್ಕಳಿಂದ ಹಾಗೂ ಊರವರಿಂದ ಮನರಂಜನ ಕಾರ್ಯಕ್ರಮ, ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ತಂಡದಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ಗಂಟೆ 7:30ಕ್ಕೆ ಸರಿಯಾಗಿ ನರಿ ಕೊಂಬು ಕುಂಬಾರರ ಯಾನೆ ಕುಲಾಲರ ಕಟ್ಟಡ ಸಮಿತಿ ಅಧ್ಯಕ್ಷ ನಾಗೇಶ್ ಕುಲಾಲ್ ನರಿಕೊಂಬು ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು,ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೆಟ್ಟುವಿನ ಧರ್ಮದರ್ಶಿ ಶ್ರೀ ರವಿ ಯನ್ ಆಶೀರ್ವಚನ ನೀಡಲಿರುವರು.

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿ ನಂತರ ಕಲಾ ಕುಂಭ ಕುಳಾಯಿ ಕುಡ್ಲ ಇವರಿಂದ ತುಳು ನಾಟಕ “ಪರಮಾತ್ಮ ಪಂಜುರ್ಲಿ ” ಜರಗಲಿರುವುದು ಎಂದು ನರಿಕೊಂಬು ಕುಂಬಾರ ಯಾನೆ ಕುಲರ ಸಂಘ( ರಿ.) ಹಾಗೂ ಮಹಿಳಾ ಘಟಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.