ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮಜಿ ಹಿ.ಪ್ರಾ ಶಾಲೆಯಲ್ಲಿ ಫೆ.8 ರಂದು ಬೆಳಗ್ಗೆ ಗಂಟೆ 9 ರಿಂದ ಮಧ್ಯಾಹ್ನ ಗಂಟೆ 1ರ ತನಕ “ವಾಕ್ -ಶ್ರವಣದೋಷ ತಪಾಸನೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.

ಬಂಟ್ವಾಳ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಟ್ಲ ಲಯನ್ಸ್ ಕ್ಲಬ್, ಕದಳಿ ಮಹಿಳಾ ವೇದಿಕೆ ದಕ್ಷಿಣ ಕನ್ನಡ, ಮಜಿ ವೀರಕಂಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಾಕ್ ಮತ್ತು ಮಂಗಳೂರು ದೇರಳಕಟ್ಟೆ ಯನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶ್ರವಣ ವಿಭಾಗ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಾರ್ಯಕ್ರಮವನ್ನು ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಮಾತಾ ಡೆವಲಪ್ಪರ್ಸ್ ಸುರತ್ಕಲ್ ನ ಎಂ. ಡಿ. ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ ಅಧ್ಯಕ್ಷತೆ ವಹಿಸಲಿರುವರು.

ವಿರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಲಿಮಾರ್, ದೇರಳಕಟ್ಟೆ ಯನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಶ್ರವಣ ವಿಭಾಗ ಎಚ್.ಒ.ಡಿ. ಶ್ವೇತ ಪ್ರಭು, ಲಯನ್ಸ್ ಕ್ಲಬ್ ವಿಟ್ಲದ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ, ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ. ಮೊದಲಾದವರು ಗೌರವ ಉಪಸ್ಥಿತಲಿರುವರು.

ಶಾಲಾ ಮಕ್ಕಳು, ಮಕ್ಕಳ ಪೋಷಕರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.