ಬಂಟ್ವಾಳ, ಫೆ. 19: ಸಮುದ್ರ ಮಟ್ಟದಿಂದ ಒಂದು ಸಹಸ್ರ ಅಡಿಗೂ ಎತ್ತರದ ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ವರ್ಷಾವಧಿ ಉತ್ಸವ ಫೆ. 24ರಿಂದ 26ರ ತನಕ ನಡೆಯಲಿದೆ ಎಂದು ದೇವಳದ ಆಡಳಿತ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್ ತಿಳಿಸಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಫೆ.24ರಂದು ಸಂಜೆ 5 ಗಂಟೆಗೆ ಕಲ್ಯಾಣ ಅಗ್ರಹಾರ ನೇತ್ರಾವತಿ ನದಿಯಲ್ಲಿ ಗಂಗಾರತಿ ನಡೆದು ಜಲಕುಂಭ ಸಹಿತ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ತಂತ್ರಿಗಳಾದ ಕೇಶವ ಶಾಂತಿ ಅವರು ಉತ್ಸವಕ್ಕೆ ಚಾಲನೆ ನೀಡುವರು.
ವಿವಿಧ ಪೂಜಾ ವೈದಿಕ ಕಾರ್ಯಕ್ರಮ ನಡೆಯುವುದು. ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಫೆ. 25 ರಂದು ಬೆಳಗ್ಗೆ 5 ಗಂಟೆಗೆ ದೇವಳದ ನಡೆ ತೆರೆದು ಪೂಜೆ ಪುನಸ್ಕಾರಗಳು. 11 ಗಂಟೆಗೆ ಸಾರ್ವಜನಿಕರಿಂದ ಧಾನ್ಯ ಕಲಶ ಸುತ್ತು ಬಲಿ ಸೇವೆ, ಮಧ್ಯಾಹ್ನ 12 ಗಂಟೆಗೆ ದೇವರಿಗೆ ಮಹಾಪೂಜೆ, ಪಲ್ಲಪೂಜೆ, ಅನ್ನ ಸಂತರ್ಪಣೆ, ಸಂಜೆ 6ಗಂಟೆ ಬಳಿಕ ಭಕ್ತಾದಿಗಳಿಂದ ರಂಗಪೂಜೆ, ಅನ್ನಪ್ರಸಾದ ವಿತರಣೆ ನಡೆಯುವುದು.
ಫೆ. 26 ರಂದು ಬೆಳಗ್ಗೆ 6 ಗಂಟೆಗೆ ಪ್ರಾತಃಕಾಲ ಪೂಜೆ, ದೇವರಿಗೆ ಅಲಂಕಾರ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 12.30ಕ್ಕೆ ಬಾಲಾನ್ನ ಭೋಜನ, ಅನ್ನ ಪ್ರಸಾದ ವಿತರಣೆ ನಡೆಯುವುದು.
ಸಂಜೆ 6 ಗಂಟೆ ಬಳಿಕ ದೀಪಾಲಂಕಾರ, ರಾಶಿಪೂಜೆ, ದೈವಗಳಿಗೆ ಪರ್ವಸೇವೆ, ಕ್ಷೇತ್ರ ರಕ್ಷಕ ಗುಳಿಗ ದೈವದ ಸೂಟೆದ ಆವಾರ, ಭಕ್ತಾದಿಗಳ ಅರಿಕೆ ಕಾಯಿ ಸಮರ್ಪಣೆ ನಡೆಯಲಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ಷೇತ್ರದ ಪ್ರಕಟಣೆ ತಿಳಿಸಿದೆ.