ಬಂಟ್ವಾಳ ತಾಲೂಕಿನ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಇದರ 7ನೇ ವರ್ಷದ ವಾರ್ಷಿಕೋತ್ಸವ, ಹಾಗೂ ಪದಗ್ರಹಣ ಕಾರ್ಯಕ್ರಮ ಫೆ. 11ರಂದು ಪೆರ್ಲಾಪು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಶ್ರೀ ನಾರಾಯಣ ಗುರುವರ್ಯರ ಗುರುಪೂಜಾ ಕಾರ್ಯಕ್ರಮ, ಬಳಿಕ ಸಂಘದ ಗೌರವಧ್ಯಕ್ಷರಾದ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ.
ನಿವೃತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಪ್ರದಾನ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕಡೇಶಿವಾಲಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಉದ್ಯಾವರ ಮಲ್ಪೆ ಯ ಶಿವಸಾಗರ್ ಹೋಟೆಲ್ ಮಾಲಕರಾದ ಪ್ರಭಾಕರ್ ಪೂಜಾರಿ, ಮಂಗಳೂರು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೌಮ್ಯ ವಿಜಯ, ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ,ಮೊದಲಾದವರು ಆಗಮಿಸಲಿದ್ದಾರೆ.
ಇದೇ ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್, ಯಕ್ಷಗಾನ ಹಾಸ್ಯ ಕಲಾವಿದ ನಾರಾಯಣ ಉಜಿರೆ ಅವರನ್ನು ಸಮ್ಮಾನಿಸಲಾಗುವುದು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಗೌರಿ ಕೆ. ಬಂಗೇರ ಬಡಕಬೈಲ್, ನಾಟಿ ಮದ್ದು ಕ್ಷೇತ್ರದಲ್ಲಿ ಪೂವಕ್ಕ ಕಡೆಕೋಳಿಮಜಲ್, ಕುಲಕಸುಬು ಮೂರ್ತೆ ಗಾರಿಕೆ ಕ್ಷೆತ್ರದಲ್ಲಿ ವಾಸು ಪೂಜಾರಿ ನೆತ್ತರ, ವಿದ್ಯಾರ್ಥಿ ಕುಮಾರಿ ಸಾನ್ವಿ ಇವರುಗಳನ್ನು ಅಭಿನಂದಿಸಲಾಗುವದು.
ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುದು ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.