ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ನಿತ್ಯವೂ ಒಂದೊಂದು ರೀತಿಯ ಕಿರಿಕ್ ಮಾಡಿಕೊಳ್ತಿದ್ದಾರೆ. ದರ್ಶನ್ ಅವರ ಈ ವರ್ತನೆ ಮುಂದಿನ ಕಾನೂನು ಹೋರಾಟಕ್ಕೆ ತೊಡಕಾಗಬಹುದು ಎಂಬ ಆತಂಕ ಇದೀಗ ಅವರ ವಕೀಲರಿಗೆ ಕಾಡ್ತಿದೆ. ಇದೇ ಕಾರಣಕ್ಕೆ ದರ್ಶನ್ಗೆ ವಕೀಲರು ಪತ್ರ ಬರೆದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಆರೋಪಿ ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿ ಯಾವುದೇ ವಿಶೇಷ ಸವಲತ್ತನ್ನು ಕೊಡುತ್ತಿಲ್ಲ. ಇದೇ ಕಾರಣಕ್ಕೆ ದರ್ಶನ್ ಜೈಲಿನಲ್ಲಿ ಒದ್ದಾಡುತ್ತಿದ್ದಾರೆ. ಹೀಗಾಗಿ ಮಾಧ್ಯಮಗಳ ಎದುರು ಅಸಭ್ಯ ವರ್ತನೆ ತೋರಿದ್ದರು. ಅಲ್ಲದೇ ಟಿವಿ ಬೇಕು. ಒಳ್ಳೆ ಟಿವಿ ಕೊಡಿ. ನಾನೇನು ಇಲ್ಲಿ ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಇಷ್ಟೊಂದು ಕಟುವಾಗಿ ನಡೆಸಿಕೊಳ್ಳಬೇಡಿ ಎಂದು ಜೈಲಿನಲ್ಲಿ ಕಿರಿಕ್ ಮಾಡಿದ್ದರು.
ಇದರ ನಡುವೆ ಬಾಡಿ ಫಿಟ್ನೆಸ್ಗಾಗಿ ಪ್ರೋಟಿನ್ ಹಾಗೂ ವಿಟಮಿನ್ ಮಾತ್ರೆಗಳು ಬೇಕೆಂದು ಕ್ಯಾತೆ ತೆಗೆದಿದ್ದರು. ಈ ವೇಳೆ ಜೈಲಾಧಿಕಾರಿಗಳು ಕಾನೂನಿನ ಪ್ರಕಾರ ವಿಚಾರಾಣಾಧಿನ ಕೈದಿಗೆ ಏನೆಲ್ಲಾ ಕೊಡಲು ಅವಕಾಶ ಇದೆಯೋ ಅಷ್ಟನ್ನು ಮಾತ್ರ ಕೊಡ್ತೀವಿ. ಹೆಚ್ಚಿಗೆ ಏನನ್ನೂ ಕೊಡೋದಕ್ಕೆ ಆಗಲ್ಲ ಎಂದಿದ್ದರು.
ಇದೆಲ್ಲವನ್ನು ಗಮನಿಸಿದ್ದ ವಕೀಲರು ಜೈಲಿನಲ್ಲಿ ದುರ್ನಡತೆ ಹಾಗೂ ಕಿರಿ ಕಿರಿ ಮಾಡದಂತೆ ಆರೋಪಿ ದರ್ಶನ್ಗೆ ನೀತಿ ಪಾಠ ಮಾಡಿದ್ದಾರೆ. ಇದರಿಂದ ಕಾನೂನು ಹೋರಾಟಕ್ಕೆ ತೊಡಕಾಗುತ್ತೆ. ಜಾಮೀನು ಸಿಗುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.