ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶಶಿಕಲಾ ಅವರಿಗೆ ನೆತ್ತರಕೆರೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ತ್ರೀ ಶಕ್ತಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸುಧೀರ್ಘ 33 ವರ್ಷಗಳ ಶಿಕ್ಚಕಿಯಾಗಿ ಸೇವೆ ಸಲ್ಲಿಸಿದ ಶಶಿಕಲಾ ಅವರನ್ನು ಶಾಲೆಯ ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಟನೆಗಳ ಪರವಾಗಿ ಸಮ್ಮಾನಿಸಲಾಯಿತು.
ಶಾಲಾಎಸ್ .ಡಿ .ಎಂ .ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪ್ರಮುಖರಾದ ಮುಂಡಾಜೆಗುತ್ತು ಜ್ಯೋತಿಂದ್ರ ಶೆಟ್ಟಿ, ನಾರಾಯಣ ಹೊಳ್ಳ, ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ, ಸಂತೋಷ್ ಕುಮಾರ್ ನೆತ್ತರಕೆರೆ, ಸುರೇಶ್ ಭಂಡಾರಿ ಅರ್ಬಿ, ಪದ್ಮನಾಭ ಶೆಟ್ಟಿ ಪುಂಚಮೆ, ಸುಬ್ರಹ್ಮಣ್ಯ ರಾವ್, ದೇವದಾಸ ಮಾಸ್ಟರ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಬ್ರೇಗ್ಸ್ ಉಪಸ್ಥಿತರಿದ್ದರು.
ವಿದ್ಯಾ ಸನ್ಮಾನ ಪತ್ರ ವಾಚಿಸಿದರು, ಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿ, ಜಸಿಂತಾ ರೊಡ್ರಿಗಸ್ ವಂದಿಸಿದರು, ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.