ಬಂಟ್ವಾಳ: ಫರಂಗಿಪೇಟೆಯ ವಿಜಯನಗರದಲ್ಲಿ ನೂತನ ನಿರ್ಮಾಣವಾಗುತ್ತಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜ. 21 ರಿಂದ 25 ರವರೆಗೆ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಶ್ರೀಆಂಜನೇಯ ಹಾಗೂ ಶ್ರೀ ಗಣಪತಿ ದೇವರ ನೂತನ ಶಿಲಾಮಯ ವಿಗ್ರಹದ ಪುರ ಪ್ರವೇಶೋತ್ಸವವು ಜ.7 ರಂದು ಸಂಜೆ ನಡೆಯಿತು.

ಕಡೆಗೋಳಿ ಶ್ರೀ ರಾಜರಾಜೇಶ್ವರಿ ಮಹಾದ್ವಾರದ ಬಳಿ ಅರ್ಚಕ ಮುರಳಿ ಭಟ್ ಕಲ್ಲತಡಮೆ ಅವರು ವಿಗ್ರಹಗಳ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ರಾಷ್ಟೀಯ ಹೆದ್ದಾರಿಯಲ್ಲಿ ಸಾಗಿ‌ಬಂದ ಶೋಭಾಯಾತ್ರೆ ಫರಂಗಿಪೇಟೆ ಆಂಜನೇಯ ಸನ್ನಿದಿಯಲ್ಲಿ‌ ಸಂಪನ್ನಗೊಂಡಿತು.

ಚೆಂಡೆ, ಜಾಗಟೆ, ತಾಲೀಮು, ಕುಣಿತ ಭಜನೆ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು. ದಾರಿಯುದ್ದಕ್ಕು ಸಹಸ್ರಾರು ಭಗವದ್ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ನಿರ್ಮಾಣ ಸಮಿತಿ ಗೌರವ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ನಿರ್ಮಾಣ ಸಮಿತಿಯ ಅಧ್ಯಕ್ಷ ಅಜಿತ್ ಚೌಟ ದೇವಸ್ಯ, ಬ್ರಹ್ಮ ಕಲಶ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಸಂಚಾಲಕ ವಿಠ್ಠಲ್ ಆಳ್ವ ಗರೋಡಿ, ಕಾರ್ಯಾಧ್ಯಕ್ಷ ಅರ್ಕುಳ ಕಂಪ ಸದಾನಂದ ಆಳ್ವ, ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ, ದೇವಸ್ಯ ಪ್ರಕಾಶ್ ಚಂದ್ರ ರೈ, ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು ಪ್ರಮುಖರಾದ ಕೃಷ್ಣ ಕುಮಾರ್ ಪೂಂಜಾ, ಕರುಣಾಕರ ಕೊಟ್ಟಾರಿ, ಪ್ರಭಾಕರ ಮಾಸ್ಟರ್, ಜಯರಾಜ್ ಕರ್ಕೆರ ಮಂಟಮೆ, ಮಾಧವ ನಾಯ್ಕ್ ಆರ್ ಕೆ, ಪುರುಷೋತ್ತಮ ಭಂಡಾರಿ ಅಡ್ಯಾರ್, ಸುಂದರ ಶೆಟ್ಟಿ ಕಲ್ಲತಡಮೆ, ದಿನೇಶ ಚಂದ್ರ ಬರ್ಕೆ, ಜಯರಾಮ ಕೊಟ್ಟಾರಿ ಧರ್ಮಗಿರಿ, ಮನೋಜ್ ತುಪ್ಪೆಕಲ್ಲು, ಅಶೋಕ್ ಶೆಟ್ಟಿ ಸುಜೀರ್ ಗುತ್ತು, ರಾಮಚಂದ್ರ ಬಂಗೇರ, ಪಿ ಸುಬ್ರಮಣ್ಯ ರಾವ್, ಗಣೇಶ ಸುವರ್ಣ ತುಂಬೆ, ಪುರುಷ ಎನ್ ಸಾಲ್ಯಾನ್, ಸಂತೋಷ ಗಾಂಭೀರ, ಧನರಾಜ್, ಜಗದೀಶ ಕಡೆಗೋಳಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಕವಿತಾ ದೇವದಾಸ್, ಭುವನೇಶ್ವರಿ ಶೆಟ್ಟಿ, ಜಯಶ್ರೀ ಕರ್ಕೇರ, ಪದ್ಮಾವತಿ ತುಪ್ಪಕಲ್ಲು ಮತ್ತಿತರರು ಉಪಸ್ಥಿತರಿದ್ದರು.