ಬೆಂಗಳೂರು: ಐಪಿಎಲ್‌ 2025ರ (IPL 2025) ಟ್ರೋಫಿಗಾಗಿ ನಡೆದ ಮಂಗಳವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಿನ ನಶೆಯಲ್ಲಿ ಫ್ಯಾನ್ಸ್‌ ತೇಲಾಡಿದ್ದಾರೆ. ಫೈನಲ್‌ ಮ್ಯಾಚ್‌ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.  ಇದನ್ನೂ ಓದಿ :ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

ಜೂನ್ 3 ರಂದು, 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿದ ಖುಷಿಯಲ್ಲಿದ್ದ ಫ್ಯಾನ್ಸ್‌ ಎಣ್ಣೆ ಕಿಕ್‌ನಲ್ಲಿ ಮಿಂದೆದ್ದಿದ್ದಾರೆ.
ಬಿಯರ್‌ ಅಷ್ಟೇ ಅಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು ಕೂಡ ಭರ್ಜರಿಯಾಗಿ ಸೇಲ್‌ ಆಗಿವೆ. 127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು.
ಒಟ್ಟಾರೆಯಾಗಿ, ಮಂಗಳವಾರ ಒಂದು ದಿನದಲ್ಲಿ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್‌ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ.