ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಸರಪಾಡಿ ಮಹಾ ಶಕ್ತಿ ಕೇಂದ್ರದ ಕಾರ್ಯಕಾರಿಣಿ ಸಭೆ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನದ ಮಾಹಿತಿ ಸಭೆಯು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಸಂತ ಸಾಲಿಯಾನ್ ಉಳಿ ಇವರ ಅಧ್ಯಕ್ಷತೆಯಲ್ಲಿ ವಗ್ಗ ಶಾರದಾಂಭ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

ಈ ಸಭೆಯಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ಕೋಟ್ಯಾನ್ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದರು.

ಮಂಡಲದ ಉಪಾಧ್ಯಕ್ಷರಾದ ಗೋವಿಂದ ಪ್ರಭು , ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಅಶೋಕ್ ಶೆಟ್ಟಿ ಸರಪಾಡಿ, ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಪ್ರಮೋದ್ ರೈ ಕಾಡಬೆಟ್ಟು, ಯುವಮೋರ್ಚದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರ್ ಮತ್ತು ಶಕ್ತಿಕೇಂದ್ರದ ಪ್ರಮುಖರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ಸಹಕಾರಿಗಳು, ಬೂತ್ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.

ಸರಪಾಡಿ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕಾರಿಂಜ ಸ್ವಾಗತಿಸಿ, ಮಂಡಲ ಯುವಮೋರ್ಚ ಕಾರ್ಯದರ್ಶಿ ನಾಗೇಶ್ ಮಧ್ವ ಕಾರ್ಯಕ್ರಮವನ್ನು ನಿರೂಪಿಸಿ, ಮಹಾಶಕ್ತಿ ಕೇಂದ್ರದ ಸದಸ್ಯರಾದ ರಾಜಕುಮಾರ್ ಉಳಿ ವಂದಿಸಿದರು.