ಕೊಳ್ನಾಡು ಮಹಾಶಕ್ತಿಕೇಂದ್ರದ ಕಾರ್ಯಕಾರಿಣಿ ಸಭೆ ಮತ್ತು ನೂತನ ಬೂತ್ ಪದಾಧಿಕಾರಿಗಳ ಅಭಿನಂದನಾ ಸಭೆಯು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಕೇಶವ್ ರಾವ್ ನೂಜಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ವಿಜಯಶ್ರೀ ಕಲ್ಯಾಣ ಮಂಟಪ ಕುಡ್ತಮುಗೇರಿನಲ್ಲಿ ನಡೆಯಿತು.

ಕೊಳ್ನಾಡು ಮಹಾಶಕ್ತಿಕೇಂದ್ರದ ಕಾರ್ಯಕಾರಿಣಿ ಸಭೆ

ಸಭೆಯಲ್ಲಿ ಜಿಲ್ಲಾ ಸದಸ್ಯತನ ಅಭಿಯಾನ ಸಂಚಾಲಕರಾದ ವಿಕಾಸ್ ಪುತ್ತೂರು, ಮಹಾಶಕ್ತಿಕೇಂದ್ರ ಸದಸ್ಯತನ ಪ್ರಭಾರಿ ಸುರೇಶ್ ಆಳ್ವ ಸಾಂತ್ಯಗುತ್ತು, ಮಂಡಲ ಪ್ರಧಾನಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಮಂಡಲ ಉಪಾಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ಮಹಾಶಕ್ತಿಕೇಂದ್ರ ಪ್ರಭಾರಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಜಿಲ್ಲಾ ನಾಯಕರಾದ ಮಾಧವ ಮಾವೆ, ಜಿಲ್ಲಾ ST ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯರಾಮ್ ನಾಯ್ಕ್ ಕುಂಟ್ರಕಲ, ಮಹಾಶಕ್ತಿಕೇಂದ್ರ ಸದಸ್ಯತನ ಸಂಚಾಲಕ ಲೋಹಿತ್ ಅಗರಿ, ಜಿಲ್ಲಾ ST ಮೋರ್ಚಾ ಉಪಾಧ್ಯಕ್ಷ ರಾಮ ನಾಯ್ಕ್ ಮಲಾರ್, ಮಂಡಲ ST ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಕನ್ಯಾನ ಮತ್ತು ಲೋಕೇಶ್ ನಾಯ್ಕ್ ಮಲಾರುಕೋಡಿ,ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ವಿಜಯ ನಾಯಕ್ ಮಂಚಿ, ಮಹಾಶಕ್ತಿ ಕೇಂದ್ರದ ಸದಸ್ಯರಾದ ಮನೋಜ್ ಬನಾರಿ, ಶ್ರೀಲತಾ ಶೆಟ್ಟಿ ಪಟ್ಲ,ಮಂಡಲ ಎಸ್, ಸಿ, ಮೋರ್ಚಾ ಉಪಾಧ್ಯಕ್ಷರಾದ ಪ್ರಸನ್ನ ಪದ್ಯಣ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ ಕುಳಾಲು ಸ್ವಾಗತಿಸಿ, ಕನ್ಯಾನ ಶಕ್ತಿಕೇಂದ್ರ ಪ್ರಮುಖ್ ಮಾತೇಶ್ ಭಂಡಾರಿ ವಂದಿಸಿದರು. ಮಂಡಲ ಸಾಂಸ್ಕೃತಿಕ ಪ್ರಕೋಷ್ಟ ಸಂಚಾಲಕ ಗಣೇಶ್ ಶೆಟ್ಟಿ ಬಾರೆಬೆಟ್ಟು ಕಾರ್ಯಕ್ರಮ ನಿರೂಪಣೆ ಮಾಡಿದರು.