ನಾವು ಹೋಗುವ ದಾರಿ ಸರಿಯಾಗಿದ್ದರೆ ಸುನೀತಿಯಿಂದ ಸುಸಂತ್ಕೃರಾಗಿ ಬಾಳಬಹುದು. ಜೀವನದುದ್ದಕ್ಕೂ ವಿದ್ಯೆಗಿಂತ ದೊಡ್ಡ ಮಹತ್ತರವಾದಧನವು ಇನ್ನೊಂದು ಇಲ್ಲ. ಪ್ರತಿಯೊಬ್ಬರು ಭಾರತೀಯ ಶಾಸ್ತ್ರೀಯ ಕಲೆಯ ಅಭ್ಯಾಸ ಹಾಗೂ ಅಧ್ಯಯನ ಮಾಡಬೇಕು ಎಂದು ಮುಂಬೈಯ ನಳಂದ ಡ್ಯಾನ್ಸ್ ಮತ್ತುರಿಸರ್ಚ್ ಸೆಂಟರ್‌ನ ಸಂಸ್ಥೆಯಿಂದ ‘ನಳಂದ ನೃತ್ಯ ನಿಪುಣೆ’ ಪ್ರಶಸ್ತಿಯನ್ನು ಮುಡಗೇರಿಸಿಕೊಂಡ, ಬೆಂಗಳೂರು ಪ್ರಭಾತ್‌ ಆರ್ಟ್ಸ್ ಇಂಟರ್‌ ನ್ಯಾಷನಲ್‌ ಇದರ ಸಹನಿರ್ದೇಶಕಿ, ವೃತ್ತಿಯಲ್ಲಿ ಲೆಕ್ಕ ಪರಿಶೋಧಕಿಯಾಗಿರುವ ವಿದೂಷಿ ದಿವ್ಯಾ ಪ್ರಭಾತ್‌ ಹೇಳಿದರು.

ಅವರು ಫೆ.8 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪಾಥಮಿಕ ಶಾಲಾ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ಭಜನೆ ಹಾಗೂ ಜನವರಿ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದರು.

ವಿದ್ವಾನ್ ದೀಪಕ್‌ ಕುಮಾರ್‌ ಅವರು ವಿದುಷಿ ದಿವ್ಯಾ ಪ್ರಭಾತ್‌ ಅವರ ಕಿರುಪರಿಚಯ ಮಾಡಿದರು.

ವಿದುಷಿ ದಿವ್ಯಾ ಪ್ರಭಾತ್‌ ಅವರಿಗೆ ಶಾಲು ಫಲಪುಷ್ಪಗಳೊಂದಿಗೆ ಗೌರವವನ್ನು ಸಮರ್ಪಿಸಲಾಯಿತು.

ಪ್ರಾರಂಭದಲ್ಲಿ ವಿದುಷಿ ದಿವ್ಯಾ ಪ್ರಭಾತ್‌ ಅವರು ಶಾರದಾ ಸ್ತುತಿಯೊಂದಿಗೆ ಶಿವ ಹಾಗೂ ಶ್ರೀಕೃಷ್ಣನ ಬಾಲಲೀಲೆಗಳನ್ನು ಭರತನಾಟ್ಯ ನೃತ್ಯರೂಪಕ ಮೂಲಕ ತೋರಿಸಿಕೊಟ್ಟರು.

2ನೇ ತರಗತಿಯ ವಿದ್ಯಾರ್ಥಿಗಳಿಂದ ಭಜನಾಕಾರ್ಯ ಕ್ರಮ ನಡೆಯಿತು.

ಪಠ್ಯೇತರಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಅಧ್ಯಾಪಕವೃಂದದವರು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳಿಗೆ ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು. ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ, ನಿಧಿ ಸಮರ್ಪಿಸಿದರು.

೬ನೇ ತರಗತಿಅಪ್ರಮೇಯ ತೋಳ್ಪಾಡಿ ಎಸ್. ವೈಯುಕ್ತಿಕ ಗೀತೆ ಹಾಡಿದನು. ವೇದಿಕೆಯಲ್ಲಿವಿದುಷಿ ದಿವ್ಯಾ ಪ್ರಭಾತ್‌ ಅವರ ಮಾತೃಶ್ರೀ ಹಾಗೂ ವಿದ್ವಾನ್ ದೀಪಕ್‌ ಕುಮಾರ್‌ ಅವರ ಮಾತೃಶ್ರೀ ಮತ್ತು ಸಹೋದರ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್‌ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರೀಲಕ್ಷ್ಮೀ ನಿರೂಪಿಸಿ, ಅಧ್ಯಾಪಕರಾದ ಸುಮಂತ್ ಆಳ್ವ ಸ್ವಾಗತಿಸಿ , ವಿದ್ಯಾರ್ಥಿನಿಯಾದ ಇಶಿಕಾ ವಂದಿಸಿದರು.