ವಿಟ್ಲ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶ್ರೀ ಕೃಷ್ಣಯ್ಯ ಬಳ್ಳಾಲ್ ಅರಮನೆ ವಿಟ್ಲ ಹೇಳಿದರು.
ಅವರು ಜು.28ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುಂಡಡ್ಕ ಕುಶಾಲ್ ನಗರ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲವಲಯದ ವತಿಯಿಂದ ಆಯೋಜಿಸಿದ್ದ ಗಿಡ ನಾಟಿ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿ ಗಿಡಮರಗಳನ್ನು ನಾವು ಬೆಳೆಸಬೇಕು ಎಂದು ಸಲಹೆ ನೀಡಿದರು.
ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುನೀತ್ ಮಾಡುತ್ತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪರಿಸರ ಸಂರಕ್ಷಣೆಯ ಬಗ್ಗೆ ಹಾಗೂ ಜಾಗೃತಿಯ ಬಗ್ಗೆ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಅವರು ಮಾಹಿತಿಯನ್ನು ನೀಡಿ ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ನಾವು ಉಸಿರಾಡುವ ಗಾಳಿಯು ಪರಿಶುದ್ಧವಾಗಿರಬೇಕು ಇದಕ್ಕೆ ಗಿಡ ಮರಗಳ ಅವಶ್ಯಕತೆಗಳಿದ್ದು ನಾವೆಲ್ಲರೂ ನಮ್ಮ ಪರಿಸರದಲ್ಲಿ ಗಿಡಗಳ ನಾಟಿ ಹಾಗೂ ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ಎಚ್. ಶಾಲಾ ಮುಖ್ಯೋಪಾಧ್ಯಯ ಜಯಪ್ರಕಾಶ್ ಡಿಸೋಜ, ಶೌರ್ಯ ವಿಪತ್ತು ಘಟಕದ ಅಧ್ಯಕ್ಷರಾದ ಚಂದ್ರಹಾಸ, ವಲಯ ಮೇಲ್ವಿಚಾರಕಿ ಸರಿತಾ ಕೆ. ಎಸ್. ಉಪಸ್ಥಿತರಿದ್ದರು.
ಚಂದ್ರ ಅವರು ಸ್ವಾಗತಿಸಿ, ಸೇವಾಪ್ರತಿನಿಧಿ ಯಶೋಧರ ವಂದಿಸಿ, ಶೌರ್ಯ ಘಟಕದ ಸದಸ್ಯರಾದ ದಮಯಂತಿ ಕಾರ್ಯಕ್ರಮ ನಿರೂಪಿಸಿದರು.