ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಆಯೋಜಿಸಿರುವ ಸ್ವಾವಲಂಬನೆಯ ಪರಿಕಲ್ಪನೆಯ ಸ್ವದೇಶಿ ಮೇಳವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.

ಸ್ವದೇಶಿ ಮೇಳ ಉದ್ಯೋಗ ಅರಸುವುದಲ್ಲ, ಉದ್ಯೋಗವನ್ನು ಸೃಷ್ಟಿಸುವ ಚಿಮ್ಮುವ ಹಲಗೆಯಾಗಬೇಕು. ಸ್ವದೇಶಿ ಉತ್ಪನ್ನಗಳ ಬಳಕೆ, ಸ್ವದೇಶಿ ಸಂಸ್ಕೃತಿ, ಸ್ವದೇಶಿ ಆಚಾರ-ವಿಚಾರಗಳನ್ನು ಉತ್ತೇಜಿಸುವ ಸಂಕಲ್ಪ ಮಾಡಬೇಕೆಂಬ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ವದೇಶಿ ಚಿಂತಕರಾದ ಪ್ರೊ.ಬಿ.ಎಂ ಕುಮಾರಸ್ವಾಮಿ ಶಿವಮೊಗ್ಗ, ಅದಮ್ಯ ಚೇತನ ಮುಖ್ಯಸ್ಥರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ನಟ ಹಾಗೂ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿ, ಕಲಾವಿದೆ ಹಾಗೂ ಮೇಳದ ಸಂಚಾಲಕರಾದ ಶ್ರೀಮತಿ ತಾರಾ ಅನುರಾಧಾ, ಶಾಸಕರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀ CK Ramamurthy ಸೇರಿದಂತೆ ಸಂಯೋಜಕರು, ಸಾರ್ವಜನಿಕರು ಉಪಸ್ಥಿತರಿದ್ದರು.