ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನಿಟಿಲಾಪುರ ನೆಟ್ಲ ಇಲ್ಲಿ ಮಾ. 30 ಆದಿತ್ಯವಾರ ಚಂದ್ರಮಾನ ಯುಗಾದಿ ದಿನ ಬೆಳಗ್ಗೆ 9.30ರಿಂದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಏಕಾದಶ ರುದ್ರಾಭಿಷೇಕ ಜರುಗಲಿದೆ. ಹಾಗೂ ಅಂದಿನಿಂದ ಪ್ರತಿನಿತ್ಯ ಶ್ರೀ ಕ್ಷೇತ್ರದಲ್ಲಿ ವೈದಿಕರಿಂದ ಅತಿಮಹಾರುದ್ರಯಾಗದ ಪಾರಾಯಣ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ  ಪ್ರಕಟನೆ ತಿಳಿಸಿದೆ