ಬಂಟ್ವಾಳ : ನಾರಾಯಣ ಗುರುಗಳು ಸಾರಿದ ಸಾರ್ವಕಾಲಿಕ ಮೌಲ್ಯ ಗಳು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬರಲೇಬೇಕಾದ ತುರ್ತು ಇಂದಿನ ಸಮಾಜಕ್ಕಿದೆ, ಶಿಕ್ಷಣದಿಂದ ಮಾತ್ರ ಮೌಡ್ಯದಿಂದ ಹೊರಬರಲು ಸಾಧ್ಯ ಎಂದು ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು.

ಅವರು ಸೆ. 19ರಂದು ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾದ ಬಂಟ್ವಾಳ ತಾಲೂಕಿನ ರಾಯಿ ಕಲ್ಲಗುಡ್ಡೆ ದೀಕ್ಷಿತಾ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 12 ನೇ ಮಾಲಿಕೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ,ಮಾಜಿ ಅಧ್ಯಕ್ಷರಾದ, ಪ್ರೇಮನಾಥ್ ಕರ್ಕೇರ,ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ಶಿವಾನಂದ ಎಂ ಸದಸ್ಯರಾದ ಜೈದೀಪ್ ಏಲಬೆ, ನಾಗೇಶ್ ಪೂಜಾರಿ ಏಲಬೆ,ಯತೀಶ್ ಬೊಳ್ಳಾಯಿ,ಹರೀಶ್ ಅಜೆಕಲ, ಸೂರಜ್ ತುಂಬೆ, ಪ್ರಶಾಂತ್ ಏರಮಲೆ , ರತ್ನಾಕರ್ ರಾಯಿ, ಸದಾನಂದ ಕರ್ಪೆ,ರಕ್ಷಿತ್ ಬದನಡಿ,ಹಸ್ತ್ ರಾಯಿ, ಅರ್ಜುನ್ ಅರಳ,ಶಾಜಲ್ ರಾಯಿ,ರಾಕೇಶ್ ರಾಯಿ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.