ಹಸಿರು ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿ ಹೆಸರುವಾಸಿಯಾಗಿದ್ದ ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡಾ. ಸ್ವಾಮಿನಾಥನ್ ಅವರು ತಮ್ಮ ದೂರದೃಷ್ಟಿ ನಾಯಕತ್ವವಷ್ಟೇ ಅಲ್ಲದೇ ಭಾರತದ ಕೃಷಿಯಲ್ಲಿ ಪರಿವರ್ತನೆ ತಂದು ದೇಶದ ಆಹಾರ ಭದ್ರತೆ ಮತ್ತು ಸಮೃದ್ಧತೆಯನ್ನು ಖಚಿತಪಡಿಸಿದ ನಾಯಕ ಎಂದು ಹೇಳಿದ್ದಾರೆ.

ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ:

“ಇದು ಅಪಾರ ಸಂತಸಕ್ಕೆ ಕಾರಣವಾಗುವ ವಿಷಯವಾಗಿದ್ದು, ಡಾ. ಎಂ.ಎಸ್. ಸ್ವಾಮಿನಾಥನ್ ಜೀ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಲಾಗುವುದು. ಅವರು ರೈತರ ಕಲ್ಯಾಣ ಮತ್ತು ಕೃಷಿಗೆ ಸ್ಮರಣೀಯ ಕೊಡುಗೆ ನೀಡಿದ್ದಾರೆ. ಸವಾಲಿನ ಸಮಯದಲ್ಲಿ ಅವರು ಭಾರತ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಮತ್ತು ಭಾರತದ ಕೃಷಿ ವಲಯವನ್ನು ಆಧುನೀಕರಣಗೊಳಿಸಲು ಅಸಾಧಾರಣವಾಗಿ ಪ್ರಯತ್ನಶೀಲರಾಗಿದ್ದಾರೆ. ನಾವೀನ್ಯತೆ ಮತ್ತು ಹಲವಾರು ವಿದ್ಯಾರ್ಥಿಗಳಲ್ಲಿ ಕಲಿಕೆ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸಿ ಮಾರ್ಗದರ್ಶಕರಾಗಿ ಮಾಡಿದ ಅವರ ಅಮೂಲ್ಯ ಕೆಲಸವನ್ನು ನಾವು ಗುರುತಿಸಿದ್ದೇವೆ. ಡಾ. ಸ್ವಾಮಿನಾಥನ್ ಅವರು ತಮ್ಮ ದೂರದೃಷ್ಟಿಯ ನಾಯಕತ್ವವಷ್ಟೇ ಅಲ್ಲದೇ ಭಾರತದ ಕೃಷಿಯಲ್ಲಿ ಪರಿವರ್ತನೆ ತರುವ, ದೇಶದ ಆಹಾರ ಭದ್ರತೆ ಮತ್ತು ಸಮೃದ್ಧತೆಯನ್ನು ಖಚಿತಪಡಿಸಿದ ನಾಯಕ. ಅವರು ನನಗೆ ನಿಕಟವಾಗಿ ತಿಳಿದಿರುವ ವ್ಯಕ್ತಿ ಮತ್ತು ನಾನು ಯಾವಾಗಲೂ ಅವರ ಒಳನೋಟ ಮತ್ತು ಒಳಹರಿವುಗಳನ್ನು ಗೌರವಿಸುತ್ತೇನೆ.” ಎಂದಿದ್ದಾರೆ.