ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕಲ್ಲಡ್ಕ ವತಿಯಿಂದ ವೀರಕಂಬ ಗ್ರಾಮದ ಮಜಿ ಹಾಗೂ ಬೊಣ್ಯಕುಕ್ಕು ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಕಾಪಾಟು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳಾದ ಗಿರಿಯಪ್ಪ ಗೌಡ ಕೆಲಿಂಜ ಅದ್ಯೇಯಿ, ಕೊರಗಪ್ಪ ನಾಯ್ಕ್ ಸಿಂಗೇರಿ, ನೋಣಯ್ಯ ಎಮ್. ಆರ್. ಮಜಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ವಿರಕಂಬ ಶಾಖ ವ್ಯವಸ್ಥಾಪಕಿ ವನಿತಾ, ಮಜಿ ಅಂಗನವಾಡಿ ಶಿಕ್ಷಕಿ ಸುಮತಿ, ಸಹಾಯಕಿ ಮಮತಾ, ಬೊಣ್ಯ ಕುಕ್ಕು ಅಂಗನವಾಡಿ ಶಿಕ್ಷಕಿ ಶಶಿಕಲಾ, ಸಹಾಯಕಿ ಸವಿತಾ,ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು.