ಬಂಟ್ವಾಳ ತಾಲೂಕಿನ ಬೊಂಡಾಲ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಂಗಳೂರು ಸಂಸ್ಕೃತ ಭಾರತಿ ಇವರು 2023 -24ರಲ್ಲಿ ಏರ್ಪಡಿಸಿದ್ದ ಸಂಸ್ಕೃತ ಪ್ರಥಮ ಪರೀಕ್ಷೆಯಲ್ಲಿ ಭಾಗವಹಿಸಿ ಒಟ್ಟು 13 ಮಕ್ಕಳು ಉತ್ತೀರ್ಣರಾಗಿದ್ದು ಮಕ್ಕಳಿಗೆ ಅಂಕಪಟ್ಟಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಸ್ಕೃತ ಭಾರತಿ ಇದರ ಪ್ರಾಂತ ಮುಖ್ಯಸ್ಥರಾದ ಸತ್ಯನಾರಾಯಣ, ಕಾರ್ಯಕರ್ತರಾದ ಕೃಷ್ಣರಾಜ್, ಸಂಸ್ಕೃತ ಅಧ್ಯಾಪಕರಾದ ದೇವರಾಜ್ ಆಚಾರ್ಯ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್ ಕಾರ್ಯಕ್ರಮದ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಬಹುಮಾನಿತರ ಪಟ್ಟಿ ವಾಚಿಸಿ, ಭವ್ಯ ವಂದಿಸಿ, ಶಿಕ್ಷಕಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು, ಕಿಶೋರಿ ಸಹಕರಿಸಿದರು.